Thursday, May 2, 2024
Homeಕರಾವಳಿಉಡುಪಿಉಡುಪಿ: ಸಂವಿಧಾನ ದಿನಾಚರಣೆ ಪ್ರಯುಕ್ತ ಹಾವಂಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಮೌಲ್ಯಯುತ ಪುಸ್ತಕಗಳ ಹಸ್ತಾಂತರ...!

ಉಡುಪಿ: ಸಂವಿಧಾನ ದಿನಾಚರಣೆ ಪ್ರಯುಕ್ತ ಹಾವಂಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಮೌಲ್ಯಯುತ ಪುಸ್ತಕಗಳ ಹಸ್ತಾಂತರ…!

spot_img
- Advertisement -
- Advertisement -

ಉಡುಪಿ: ಹಾವಂಜೆ ಗ್ರಾಮ ಪಂಚಾಯತ್ ನಲ್ಲಿ ಹಾವಂಜೆ ಗ್ರಾಮ ವಿಕಾಸ ಸಮಿತಿ ಯ ಸಹಭಾಗಿತ್ವದೊಂದಿಗೆ ಸಂವಿಧಾನ ದಿನಾಚರಣೆ ಹಾಗು ಪುಸ್ತಕದಾನಿಗಳಿಂದ ಸಂಗ್ರಹಿಸಲಾದ ಮೌಲ್ಯಯುತ ಪುಸ್ತಕಗಳನ್ನು ಹಾವಂಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.

ಸಂವಿಧಾನ ದಿನಾಚರಣೆಯ ಮಹತ್ವ ಹಾಗು ಹಾವಂಜೆ ಗ್ರಾಮ ವಿಕಾಸ ಸಮಿತಿಯ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಧ್ಯೇಯ ಒಂದೇ ಗ್ರಾಮ ವಿಕಾಸ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮದಲ್ಲಿ ಕೈಗೊಳ್ಳುತ್ತಿರುವ ಸ್ವಚ್ಚತಾ ಕಾರ್ಯಕ್ರಮಗಳು, ರಕ್ತದಾನ ಶಿಬಿರ, ಬಡರೋಗಿಗಳು ಹಾಗು ಅಶಕ್ತರಿಗೆ ನೆರವಾಗುವುದು, ಶಾಲಾ ಮಕ್ಕಳಿಗೆ ವಿಮೆ, ಗ್ರಂಥಾಲಯಕ್ಕೆ ಪುಸ್ತಕ ದಾನ ಇತ್ಯಾದಿ ಕೆಲಸಗಳು ಗ್ರಾಮದ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಪ್ರತಿಯೊಂದು ಸಂಘಸಂಸ್ಥೆಗಳು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹಾವಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ದಿವ್ಯ ಎಸ್, ಉಪಾಧ್ಯಕ್ಷರಾದ ಸುಜಾತ ಶೆಟ್ಟಿ, ಕಾರ್ಯದರ್ಶಿ ವಿಮಾಲಾಕ್ಷಿ ಶೆಟ್ಟಿ, ಗ್ರಂಥಾಲಯ ಮೇಲ್ವಿಚಾರಕಿ ಸುಮತಿ ಹಾವಂಜೆ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ಸತ್ಯನಾರಾಯಣ ಆಚಾರ್ಯ ಹಾಗು ಸದಸ್ಯರುಗಳು, ಹಾವಂಜೆಯ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಹಾಗು ಸ್ಥಳೀಯರು ಉಪಸ್ಥಿತರಿದ್ದರು. ಪಂಚಾಯತ್ ನ ಸದಾಶಿವ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -
spot_img

Latest News

error: Content is protected !!