Friday, June 5, 2026
Homeಕರಾವಳಿಮಂಗಳೂರು: ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿಯ ಕಾಮಕಾಂಡ..? ರಸಿಕ ಡಾಕ್ಟರ್ ನ ಸರಸದ ಫೋಟೋ ಎಲ್ಲೆಡೆ...

ಮಂಗಳೂರು: ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿಯ ಕಾಮಕಾಂಡ..? ರಸಿಕ ಡಾಕ್ಟರ್ ನ ಸರಸದ ಫೋಟೋ ಎಲ್ಲೆಡೆ ವೈರಲ್..!

- Advertisement -
- Advertisement -

ಮಂಗಳೂರು: ಬಡವರ ಪಾಲಿನ ಆಶಾಕಿರಣವಾಗಿರುವ ದೊಡ್ಡ ಆಸ್ಪತ್ರೆಯ ಆರೋಗ್ಯ ಇಲಾಖೆ ಅಧಿಕಾರಿಯ ಕಾಮ ಪುರಾಣ ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ನಗರದ ಆಸ್ಪತ್ರೆಯಲ್ಲಿ ಕಚೇರಿ ಹೊಂದಿರುವ ಆಯುಷ್ಮಾನ್ ನೋಡೆಲ್ ಆಫೀಸರ್ ಮತ್ತು ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ಮಹಿಳಾ ಸಿಬ್ಬಂದಿಗಳ ಜೊತೆ ಹಾಡಹಗಲೇ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿರೋ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ನಿತ್ಯ ಚೆಲ್ಲಾಟವಾಡುವ ಈ ಅಧಿಕಾರಿ
ಚೆಲ್ಲಾಟಕ್ಕೆ ಸಹಕರಿಸದ ಸಿಬ್ಬಂದಿಗೆ ಟಾರ್ಚರ್ ಕೊಡುತ್ತಿದ್ದ ಎಂದು ದೂರುಗಳು ಕೇಳಿಸಲಾರಂಭಿಸಿದೆ. ಅಲ್ಲದೆ, ಕೇವಲ ಮಹಿಳಾ ಸಿಬ್ಬಂದಿಗಳನ್ನು ಕರೆದುಕೊಂಡು ಜಾಲಿ ಟ್ರಿಪ್ ಹೋಗುತ್ತಿದ್ದ. ವಿಪರ್ಯಾಸವೆಂದರೆ ರತ್ನಾಕರನ ಆಟಾಟೋಪದ ವಿರುದ್ದ ಈವರೆಗೆ ಯಾವುದೇ ಮಹಿಳಾ ಸಿಬ್ಬಂದಿಗಳು ದೂರೇ ನೀಡದೇ ಆತನಿಗೆ ಕರ್ತವ್ಯದ ಅವಧಿಯಲ್ಲಿ ಅನೈತಿಕ ವರ್ತನೆಗೆ ಸಹಕರಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.

ಸಾಮಾಜಿಕ ತಾಣಗಳಲ್ಲಿ ಈ ಎಲ್ಲ ಅಶ್ಲೀಲ ವೀಡಿಯೊ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ಈ ವಿಚಾರ ಬಂದಿದ್ದು, ರತ್ನಾಕರ್ ನನ್ನು ಸಸ್ಪೆಂಡ್ ಮಾಡಲು ಆರೋಗ್ಯ ಇಲಾಖೆಗೆ ಡಿ.ಸಿ. ರಾಜೇಂದ್ರ ಸೂಚಿಸಿದ್ದಾರೆ.

- Advertisement -

Latest News

error: Content is protected !!