Saturday, June 6, 2026
Homeಕರಾವಳಿಯುವಕನೊಬ್ಬ ಮನನೊಂದು ನೇತ್ರಾವತಿ ಸೇತುವೆಯ ಮೇಲಿಂದ ಹಾರಲು ಯತ್ನ !

ಯುವಕನೊಬ್ಬ ಮನನೊಂದು ನೇತ್ರಾವತಿ ಸೇತುವೆಯ ಮೇಲಿಂದ ಹಾರಲು ಯತ್ನ !

- Advertisement -
- Advertisement -

ಪುತ್ತೂರು: ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಯುವಕನೊಬ್ಬ ಯತ್ನಿಸಿದ್ದಾನೆ. ಯುವಕ ತನ್ನ ಕಿಸೆಯಲ್ಲಿ ಚೀಟಿಯೊಂದನ್ನು ಇರಿಸಿದ್ದು, ಮನೆಯಲ್ಲಿ ತನಗೆ ಬೈಯುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪುತ್ತೂರಿನ ಕೊಡಿಪ್ಪಾಡಿ ಮನೆ ನಿವಾಸಿ ನಾಗೇಶ (23) ಎಂಬಾತ ನೇತ್ರಾವತಿ ಸೇತುವೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ. ಇದನ್ನು ಕಂಡ ಇಳಂತಿಲದ ಯು. ಟಿ. ಫಯಾಝ್, ರಶೀದ್ ಮತ್ತು ಇಕ್ಬಾಲ್ ಎಂಬವರು ಸೇತುವೆಯತ್ತ ಬಂದರು.

ಈ ವೇಳೆ ಆತ ನದಿಗೆ ಹಾರಲು ಮುಂದಾಗುತ್ತಿದ್ದಂತೆಯೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ದೈವ ನರ್ತನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಈತನಿಗೆ ಪೊಲೀಸರು ಬುದ್ದಿವಾದ ಹೇಳಿ ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ

- Advertisement -

Latest News

error: Content is protected !!