Monday, June 8, 2026
Homeಪ್ರಮುಖ-ಸುದ್ದಿಪುತ್ತೂರು: ಮೈ ಮೇಲೆ ಬಿಸಿ ನೀರು ಬಿದ್ದು ಮಹಿಳೆ ಸಾವು...!

ಪುತ್ತೂರು: ಮೈ ಮೇಲೆ ಬಿಸಿ ನೀರು ಬಿದ್ದು ಮಹಿಳೆ ಸಾವು…!

- Advertisement -
- Advertisement -

ಪುತ್ತೂರು: ಮೈ ಮೇಲೆ ಬಿಸಿ ನೀರು ಬಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.

ಸವಣೂರು ಗ್ರಾಮದ ಮಾಂತೂರು ನಿವಾಸಿ ಕುಂಞಾಲಿಮ್ಮ ಮೃತ್ಪಟ್ಟ ಮಹಿಳೆ. ಇವರು ಒಂದೂವರೆ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸಂಜೆ ಹೊತ್ತು ಸ್ನಾನ ಮಾಡಲು ಒಲೆಯಲ್ಲಿ ಬಿಸಿ ನೀರು ಕಾಯಿಸಿ, ಬಿಸಿನೀರು ತುಂಬಿರುವ ಪಾತ್ರೆಯನ್ನು ಎತ್ತಿಕೊಂಡು ಬಚ್ಚಲು ಕೋಣೆಗೆ ಒಯ್ಯುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ನೀರು ತುಂಬಿದ್ದ ಪಾತ್ರ ಕೈ ಹಿಡಿತದಿಂದ ಜಾರಿ ಕೆಳಗೆ ಬಿದ್ದು ಬಿಸಿ ನೀರು ಮೈ-ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!