Monday, June 8, 2026
Homeಕರಾವಳಿಉಡುಪಿಉಡುಪಿ : ಅಲಂಕಾರ್ ಚಿತ್ರ ಮಂದಿರದ ಮುಂದೆ ಮೃತ್ಯುಕೂಪ !

ಉಡುಪಿ : ಅಲಂಕಾರ್ ಚಿತ್ರ ಮಂದಿರದ ಮುಂದೆ ಮೃತ್ಯುಕೂಪ !

- Advertisement -
- Advertisement -

ಉಡುಪಿ: ನಗರದ ಕವಿ ಮುದ್ದಣ ಮಾರ್ಗದಲ್ಲಿನ ಅಲಂಕಾರ್ ಚಿತ್ರ ಮಂದಿರದ ಮುಂದಿರುವ ಆಳವಾದ ಕಂದಕ ಇದೀಗ ಮೃತ್ಯು ಕೂಪವಾಗಿ ಮಾರ್ಪಟ್ಟಿದೆ.

ಇಲ್ಲಿ ಬಹಳಷ್ಟು ಪಾದಚಾರಿಗಳು ಬಿದ್ದು ಗಾಯಗೊಂಡಿರುವ ಹಾಗೂ ವಾಹನಗಳು ಹೊಂಡದಲ್ಲಿ ಸಿಲುಕಿಕೊಂಡು ಘಾಸಿಗೊಂಡ ಘಟನೆಗಳು ನಡೆದಿದೆ

ಸಾರ್ವಜನಿಕರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸಿನೆಮಾ ವಿಕ್ಷಕರು, ಆಸ್ಪತ್ರೆಗೆ ತೆರಳುವ ರೋಗಿಗಳು ಸಾಕಷ್ಟು ಮಂದಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ . ನಗರಸಭೆಯವರು ತಕ್ಷಣ ಕಂದಕಕ್ಕೆ ಚಪ್ಪಡಿ ಅಳವಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ

- Advertisement -

Latest News

error: Content is protected !!