Saturday, June 6, 2026
Homeಕರಾವಳಿಕಡಬ: ಕಾರಿನಲ್ಲಿ ಬಾಲಕಿಯನ್ನು ಹಿಂಬಾಲಿಸಿದ ಪ್ರಕರಣಕ್ಕೆ ರೋಚಕ ತಿರುವು; ಅಸಲಿ ಸತ್ಯವೇನು ? ಈ ಸ್ಟೋರಿ...

ಕಡಬ: ಕಾರಿನಲ್ಲಿ ಬಾಲಕಿಯನ್ನು ಹಿಂಬಾಲಿಸಿದ ಪ್ರಕರಣಕ್ಕೆ ರೋಚಕ ತಿರುವು; ಅಸಲಿ ಸತ್ಯವೇನು ? ಈ ಸ್ಟೋರಿ ಓದಿ!

- Advertisement -
- Advertisement -

ಕಡಬ: ಶಾಲೆ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಸಲಿ ಸತ್ಯ ಬಹಿರಂಗವಾಗಿದೆ.

ಕಡಬ ತಾಲೂಕಿನ ಕೋಡಿಂಬಾಳ ಮಡ್ಯಡ್ಕ ರಸ್ತೆಯಲ್ಲಿ ಮಂಗಳವಾರ ಸಾಯಂಕಾಲ ಶಾಲೆ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ್ದು, ಇದನ್ನು ಗಮನಿಸಿದ ಶಾಲಾ ಬಾಲಕಿ ಅಲ್ಲಿಂದ ಓಡಿ ಮನೆಯಲ್ಲಿ ಹೇಳಿದ್ದಳು.

ಇಲ್ಲಿ ನಡೆದಿರುವ ಅಸಲಿ ಸಂಗತಿಯೇ ಬೇರೆ, ಮಂಗಳವಾರ ಕೋಡಿಂಬಾಳ ಗ್ರಾಮದ ಉಂಡಿಲ ಕ್ರಾಸ್ ಬಳಿ ಕಾರಲ್ಲಿ ಬಂದು ಪಂಚಾಯತ್ ನ ಇಬ್ಬರು ಸಿಬ್ಬಂದಿ ಜಿಪಿಎಸ್ ಮಾಡುತ್ತಿದ್ದರು.ಈ ವೇಳೆ ರಸ್ತೆ ಬದಿ ಕಾರು ನಿಲ್ಲಿಸಿ ಜಿಪಿಎಸ್ ಮಾಡುವ ಸಲುವಾಗಿ ಕಾರಿನಿಂದ ಇಳಿದಿದ್ದು ಇದನ್ನು ಕಂಡ ವಿದ್ಯಾರ್ಥಿನಿ ಭಯದಿಂದ ಓಡಿದ್ದಳು.

ಈ ವಿಚಾರ ಸಿಬ್ಬಂದಿ ಗಮನಕ್ಕೂ ಬಂದಿತ್ತು, ಬಾಲಕಿ ಮನೆಗೆ ಹೋಗಿ ತಮ್ಮ ಪೋಷಕರಲ್ಲಿ ತಿಳಿಸಿದ್ದು, ಅವರು ಪೊಲೀಸರಿಗೆ ಹಾಗೂ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ವಿಚಾರ ಈ ರೀತಿ ತಿರುಗಿದ್ದು ತಿಳಿದ ಪಂಚಾಯತ್ ಸಿಬ್ಬಂದಿ ಸಾರ್ವಜನಿಕರು ಗೊಂದಲ ಪಡುವುದು ಬೇಡ ಎಂದು ನಡೆದ ಘಟನೆಯನ್ನು ಪೊಲೀಸರಲ್ಲಿ ಹಾಗೂ ಸಂಬಂಧಿತರಲ್ಲಿ ತಿಳಿಸಿದ್ದಾರೆ.ಇಲ್ಲಿ ವಿದ್ಯಾರ್ಥಿನಿಯ ತಪ್ಪು ಗ್ರಹಿಕೆಯಿಂದ ಓಡಿದ್ದು ಎಂದು ಪೊಲೀಸ್ ಹಾಗೂ ಬಾಲಕಿಯನ್ನು ಯಾರು ಹಿಂಬಾಲಿಸಿಲ್ಲ ಎಂದು ಸ್ಪಷ್ಟವಾಗಿದೆ.

- Advertisement -

Latest News

error: Content is protected !!