Saturday, June 6, 2026
Homeಅಪರಾಧಕಾರ್ಕಳ: ದನದ ಕಾಲು ಕಡಿದು ಯಜಮಾನನಿಗೆ ಜೀವ ಬೆದರಿಕೆ!

ಕಾರ್ಕಳ: ದನದ ಕಾಲು ಕಡಿದು ಯಜಮಾನನಿಗೆ ಜೀವ ಬೆದರಿಕೆ!

- Advertisement -
- Advertisement -

ಕಾರ್ಕಳ : ಗದ್ದೆಗೆ ಬಂದು ಮೇಯುತ್ತಿದ್ದ ದನವೊಂದರ ಕಾಲು ಕಡಿದು ,ಜೀವ ಬೆದರಿಕೆಯೊಡ್ಡಿದ ಘಟನೆ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಸಂತೋಷ್ ಹೆಗ್ಡೆ ಸಾಕು ದನಗಳನ್ನು ಮೇಯಲೆಂದು ಬೈಲು ಗದ್ದೆಗೆ ಬಿಟ್ಟಿದ್ದರು. ಮೇವಿಗಾಗಿ ಬಿಟ್ಟ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿದ್ದು, ಇದರಿಂದ ಕುಪಿತಗೊಂಡ ಅಮಣ್ಣಿ ಕತ್ತಿಯಿಂದ ದನದ ಕಾಲು ಕಡಿದಿದ್ದಾರೆ. ಇದೇ ವಿಷಯವಾಗಿ ಸಂತೋಷ್ ಹೆಗ್ಡೆಗೆ ಅಮಣ್ಣಿಯ ಮೂವರು ಮಕ್ಕಳು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

ಎರ್ಲಪ್ಪಾಡಿಯ ಸಂತೋಷ್ ಹೆಗ್ಡೆ ಈ ಪ್ರಕರಣದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದಾರೆ.

- Advertisement -

Latest News

error: Content is protected !!