Sunday, June 7, 2026
Homeಕರಾವಳಿಉಡುಪಿಉಡುಪಿ : ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಳಲಗಿರಿಯ ವ್ಯಕ್ತಿ ಸಾವು!

ಉಡುಪಿ : ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಳಲಗಿರಿಯ ವ್ಯಕ್ತಿ ಸಾವು!

- Advertisement -
- Advertisement -

ಉಡುಪಿ : ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಲ್ಲಿನ ಕೊಳಲಗಿರಿ ಮೂಲದ ನಿವಾಸಿ ರೂಡಿ ರೋಷನ್ ಡಿಸೋಜಾ (33) ಮೃತಪಟ್ಟಿದ್ದಾರೆ.

ರೂಡಿ ರೋಷನ್ ಅವರು ಮುಂಬೈನ ಶಿಪ್‌ಯಾರ್ಡ್‌ನಲ್ಲಿ ಕಳೆದ 7 ವರ್ಷಗಳಿಂದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 22 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತಿದ್ದಾಗ ಅವರ ಬೈಕ್ ಗೆ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಸಾವನ್ನಪ್ಪಿದರು.

ಮೃತರು ತಾಯಿ ಮೇರಿ ಡಿಸೋಜಾ, ತಂದೆ ಆಲ್ಫ್ರೆಡ್ ಡಿಸೋಜಾ ,ಪತ್ನಿ ಸುರುಚಿ ಡಿಸೋಜಾ ಮತ್ತು ಪುತ್ರ ಇವಾನ್ ಡಿಸೋಜಾ ಅವರನ್ನು ಅಗಲಿದ್ದಾರೆ. ರೋಷನ್ ಡಿಸೋಜಾ ರವರ ಪಾರ್ಥಿವ ಶರೀರವನ್ನು ಇಂದು ಊರಿಗೆ ತರಲಾಗುತ್ತಿದ್ದು ಸಂಜೆ ಕೋಳಲಗಿರಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

.

- Advertisement -

Latest News

error: Content is protected !!