Saturday, June 6, 2026
Homeಕರಾವಳಿಸುಳ್ಯ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು...!

ಸುಳ್ಯ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು…!

- Advertisement -
- Advertisement -

ಸುಳ್ಯ: ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯದ ಕನಕಮಜಲು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಪರುಂಬಾರು ನಿವಾಸಿ ಜಯರಾಮ ಗೌಡ(52) ಎಂದು ಗುರುತಿಸಲಾಗಿದೆ.

ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿ ಮನೆಯಿಂದ ಹೊರಟು ಹೋಗಿದ್ದಾರೆನ್ನಲಾಗಿದೆ . ಬಳಿಕ ಮನೆಗೆ ಬಾರದೆ ಇದ್ದ ಅವರನ್ನು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಅವರ ಮೃತದೇಹ ಮನೆಯಿಂದ 1ಕಿ.ಮೀ ದೂರದ ಕಾರಿಂಜ ಸಿಆರ್‌ ಸಿ ಕಾಲೊನಿ ಬಳಿಯ ಕರೆಯಲ್ಲಿ ಪತ್ತೆಯಾಗಿದೆ. ರಾತ್ರಿವೇಳೆ ಸಂಚರಿಸುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿರುವುದು ಶಂಕಿಸಲಾಗಿದೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ, ಹಾಗು ಸುಳ್ಯ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!