Saturday, June 6, 2026
HomeUncategorizedಬೆಳ್ತಂಗಡಿ: ಸದಾನಂದ ಗೌಡರಿಗೆ ಸೌಜನ್ಯಾಳ ಶಾಪ ತಟ್ಟಿದೆ; ಸಮಯ ಬಂದಾಗ ಶಾಸಕರ ಸಂಸದರ ಸಿಡಿ ಬಿಡುಗಡೆ...

ಬೆಳ್ತಂಗಡಿ: ಸದಾನಂದ ಗೌಡರಿಗೆ ಸೌಜನ್ಯಾಳ ಶಾಪ ತಟ್ಟಿದೆ; ಸಮಯ ಬಂದಾಗ ಶಾಸಕರ ಸಂಸದರ ಸಿಡಿ ಬಿಡುಗಡೆ ಮಾಡುತ್ತೇನೆ ಎಂದ ಮಹೇಶ್ ಶೆಟ್ಟಿ ತಿಮರೋಡಿ

- Advertisement -
- Advertisement -

ಬೆಳ್ತಂಗಡಿ: 2012ರಲ್ಲಿ ಸೌಜನ್ಯ ಕೊಲೆ ಆದ ಬಳಿಕ ಬಿಜೆಪಿಗೆ ಶಾಪ ತಟ್ಟಿದ್ದು, ಬಿಜೆಪಿಯ ನಾಯಕರ ಅತ್ಯಾಚಾರದ ಸುರಿಮಳೆ ಶುರುವಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ದೇಗುಲ ಕೆಡವಿದ ವಿರುದ್ಧ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸದಾನಂದ ಗೌಡ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಲವು ಶಾಸಕರ ಹಾಗೂ ಸಂಸದರ ಸಿ.ಡಿ ನನ್ನಲ್ಲಿದೆ, ಯಾವ ಯಾವ ಎಂಎಲ್‌ಎ, ಎಂಪಿಗಳಿಂದ ಎಲ್ಲಿ ಯಾವ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ, ಎಲ್ಲಿ ಎಷ್ಟು ಹೆಣ್ಣು ಮಕ್ಕಳ ಅತ್ಯಾಚಾರ ನಡೆಯುತ್ತಿದೆ ಎಂದು ಎಲ್ಲವನ್ನೂ ಸಮಯ ಬಂದಾಗ ಬಿಡಿಸಿಕೊಡುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಇನ್ನು ನಮ್ಮದೇ ಜಿಲ್ಲೆಯ ಶಾಸಕ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಸಂಧರ್ಭದಲ್ಲಿ ಸ್ಟೈಲ್ ಮಾಸ್ಟರ್ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದು, ಹುಡುಗಿ ಸತ್ತು ಎರಡು ದಿವಸದಲ್ಲಿ ಧರ್ಮಸ್ಥಳಕ್ಕೆ ಬಂದಿದ್ದಾರೆ, ಅವರಿಗೆ ಸೌಜನ್ಯಾಳ ಶಾಪ ತಟ್ಟಿದೆ” ಎಂದು ಹೇಳಿದ್ದಾರೆ.

- Advertisement -

Latest News

error: Content is protected !!