Friday, June 5, 2026
Homeಕರಾವಳಿಸಾಕ್ಷ್ಯಾಧಾರದ ಕೊರತೆಯಿಂದಾಗಿ ಅನುಶ್ರೀ ವಿರುದ್ಧ ಪ್ರಕರಣ ದಾಖಲಿಸಿಲ್ಲ: ಎನ್.ಶಶಿಕುಮಾರ್

ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅನುಶ್ರೀ ವಿರುದ್ಧ ಪ್ರಕರಣ ದಾಖಲಿಸಿಲ್ಲ: ಎನ್.ಶಶಿಕುಮಾರ್

- Advertisement -
- Advertisement -

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಆಂಕರ್ ಅನುಶ್ರೀ ಹೆಸರು ಕೂಡ ಉಲ್ಲೇಖವಾಗಿದೆ. ಆದರೆ ಅನುಶ್ರೀ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಸ್ವತಃ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿದೆ. ತಾನು ಆಯುಕ್ತನಾಗಿ ಬರುವಷ್ಟರಲ್ಲೇ ತನಿಖೆ ಪೂರ್ಣವಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.


ನ್ಯಾಯಾಲಯಕ್ಕೆ ಫೈನಲ್ ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಸಲಾಗಿದೆ. ನಿರೂಪಕಿ ಅನುಶ್ರೀ ವಿರುದ್ಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅಂದು ಪ್ರಕರಣ ದಾಖಲಿಸಲಾಗಿಲ್ಲ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ವಿಚಾರಣೆಯ ಸಾಧ್ಯತೆ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ 2007ರಲ್ಲಿ ನಡೆದಿದ್ದರಿಂದ ಮತ್ತು ಅನುಶ್ರೀ ವಿರುದ್ಧ ಸಾಕ್ಷಾಧಾರಗಳು ಇಲ್ಲದ್ದರಿಂದ ಅವರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಾಗಿಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಇನ್ನು ಚಾರ್ಜ್ ಶೀಟ್ ನಲ್ಲಿರುವ ಹೇಳಿಕೆ ನನ್ನದಲ್ಲ ಎಂಬ ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರು, ಚಾರ್ಜ್ ಶೀಟ್ ನಲ್ಲಿನ ಅಂಶಗಳನ್ನು ಓದಿ ಹೇಳಿ ನಂತರ ವ್ಯಕ್ತಿ ಸಹಿ ಪಡೆಯಲಾಗುತ್ತದೆ. ಹೇಳಿಕೆ ಅವರದ್ದಲ್ಲ ಎನ್ನುವುದಾದರೆ ಕಿಶೋರ್ ಅಂದು ನ್ಯಾಯಾಲಯದಲ್ಲೇ ಹೇಳಬಹುದಿತ್ತು. ಈಗ ಹೇಳಿಕೆ ನನ್ನದಲ್ಲ ಎಂಬುದು ತಪ್ಪು ಎಂದಿದ್ದಾರೆ.

- Advertisement -

Latest News

error: Content is protected !!