Sunday, April 28, 2024
Homeತಾಜಾ ಸುದ್ದಿಅನುಶ್ರೀ ಬಗ್ಗೆ ಚಾರ್ಜ್ ಶೀಟ್ ನಲ್ಲಿ ದಾಖಲಾದ ಹೇಳಿಕೆ ನನ್ನದಲ್ಲ ಎಂದ ಕಿಶೋರ್ ಶೆಟ್ಟಿ

ಅನುಶ್ರೀ ಬಗ್ಗೆ ಚಾರ್ಜ್ ಶೀಟ್ ನಲ್ಲಿ ದಾಖಲಾದ ಹೇಳಿಕೆ ನನ್ನದಲ್ಲ ಎಂದ ಕಿಶೋರ್ ಶೆಟ್ಟಿ

spot_img
- Advertisement -
- Advertisement -

ಬೆಂಗಳೂರು: ಡ್ರಗ್ ಕೇಸ್ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಕಿಶೋರ್ ಅಮನ್ ಶೆಟ್ಟಿ ಅವರು, ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಸಲ್ಲಿಸಲಾದ ಚಾರ್ಜ್​ಶೀಟ್ ನಲ್ಲಿರುವ ಅನುಶ್ರೀ ಬಗ್ಗೆಯ ವಿಚಾರ ನಾನು ಹೇಳಿರುವ ಹೇಳಿಕೆಯಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಟಿ, ಸ್ಟಾರ್ ಆಯಂಕರ್​ ಅನುಶ್ರೀ ಡ್ರಗ್ಸ್​ ಕೇಸ್​ ವಿಚಾರಕ್ಕೆ ಸಂಬಂಧಪಟ್ಟಂತೆ ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದು, ”ನನಗೆ ಡ್ರಗ್ಸ್​​ ಪ್ರಕರಣದ ಬಗ್ಗೆ ಏನೇನೂ ಗೊತ್ತಿಲ್ಲ. ಚಾರ್ಜ್‌ಶೀಟ್‌ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಟಿ ಅನುಶ್ರೀ ಜೊತೆ ಯಾವುದೇ ಪಾರ್ಟಿ ಮಾಡಿಲ್ಲ. ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆ ಅಲ್ಲ” ಎಂದು ಆರೋಪಿಸಿದ್ದಾರೆ.



ಅನುಶ್ರೀ ನಿಮಗೆ ಹೇಗೆ ಪರಿಚಯ ಎಂದು ಮಾತ್ರ ಕೇಳಿದ್ದರು. ಅದನ್ನು ಸಿಸಿಬಿ ಪೊಲೀಸರಿಗೆ ತಿಳಿಸಿದ್ದೇನೆ. ಡ್ರಿಂಕ್ಸ್ ಬಗ್ಗೆ ಮಾತ್ರ ಗೊತ್ತಿದೆ ಡ್ರಗ್ಸ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇದರಿಂದ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.

ನಾನು ಅನುಶ್ರೀಗೆ ಕೊರಿಯೋಗ್ರಾಫ್ ಮಾಡಿದ್ದೇನೆ ಅಷ್ಟೇ. ಅದರ ಹೊರತಾಗಿ ಅವರೊಂದಿಗೆ ನನ್ನ ಒಡನಾಟ ಅಷ್ಟೊಂದು ಇಲ್ಲ. ಕೊರಿಯೋಗ್ರಫಿಯಲ್ಲದೇ ಮತ್ಯಾವ ಕಾಂಟ್ಯಾಕ್ಟ್ ಇರಲಿಲ್ಲ. ಚಾರ್ಜ್​ಶೀಟಿನಲ್ಲಿರುವ ಮಾಹಿತಿ ತನಗೆ ಗೊತ್ತಿಲ್ಲ. ಅನುಶ್ರೀ ಒಳ್ಳೆಯ ರೀತಿಯಲ್ಲಿ ಮೇಲೆ ಹೋಗುತ್ತಿದ್ದಾರೆ. ಅವರ ಬಗ್ಗೆ ನಾನು ಏನೂ ಮಾತನಾಡಿಲ್ಲ ಎಂದು ಕಿಶೋರ್ ತಿಳಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​ಶೀಟ್​ನಲ್ಲಿ ಎ2 ಕಿಶೋರ್ ಶೆಟ್ಟಿಯ ಹೇಳಿಕೆ ದಾಖಲಿಸಿ ಅವರ ಸಹಿ ಕೂಡ ಪಡೆಯಲಾಗಿದೆ. ‘ರಿಯಾಲಿಟಿ ಶೋನ ಕೊರಿಯೋಗ್ರಾಫರ್​ ಆಗಿದ್ದ ತರುಣ್​ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್​ ರೂಮ್​ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡ್ಯಾನ್ಸ್ ಪ್ರಾಕ್ಟೀಸ್​ ಗೆ ಬರುವಾಗ ಅನುಶ್ರೀ ಎಕ್ಸ್‌ ಟಸಿ ಡ್ರಗ್ಸ್​ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್‌ ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್​ ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತೆ, ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್​ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ.’ ಎಂದು ಕಿಶೋರ್​ ಶೆಟ್ಟಿ ಹೇಳಿಕೆಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

- Advertisement -
spot_img

Latest News

error: Content is protected !!