Saturday, April 27, 2024
Homeತಾಜಾ ಸುದ್ದಿಬಾಲಿವುಡ್​ ನಟ ಅಕ್ಷಯ್​ ಕುಮಾರ್ ತಾಯಿ ನಿಧನ!

ಬಾಲಿವುಡ್​ ನಟ ಅಕ್ಷಯ್​ ಕುಮಾರ್ ತಾಯಿ ನಿಧನ!

spot_img
- Advertisement -
- Advertisement -

ಮುಂಬೈ: ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಭಾಟಿಯಾ ಅವರನ್ನು ಎರಡು ದಿನದ ಹಿಂದೆ ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಈ ವೇಳೆ ಸಿಂಡ್ರೆಲಾ ಸಿನಿಮಾ ಶೂಟಿಂಗ್​ಗಾಗಿ ಅಕ್ಷಯ್​ ಕುಮಾರ್​ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್​ ಅನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ವಾಪಸ್​ ಆಗಿದ್ದರು.

ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಅಕ್ಷಯ್​ರ ಅಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯನ್ನು ಸ್ವತಃ ಅಕ್ಷಯ್​ ಅವರೇ ಟ್ವೀಟ್​ ಮೂಲಕ ತಿಳಿಸಿದ್ದಾರೆ.

‘ಅವಳು ನನ್ನ ಮೂಲ. ಅಮ್ಮ ಬದುಕಿಲ್ಲ ಎಂಬ ಕಹಿಸತ್ಯ ನನಗೆ ಸಹಿಸಲಾಗದ ನೋವನ್ನು ಕೊಟ್ಟಿದೆ. ನನ್ನ ಅಮ್ಮ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಬೇರೆ ಜಗತ್ತಿನಲ್ಲಿರುವ ನನ್ನ ತಂದೆ ಜತೆ ನನ್ನಮ್ಮ ಸೇರಿಕೊಂಡಿದ್ದಾರೆ. ಓ ಶಾಂತಿ…’ ಎಂದು ಅಕ್ಷಯ್ ಕುಮಾರ್ ಟ್ವಿಟರ್​ನಲ್ಲಿ ಮನದ ನೋವನ್ನು ಅಕ್ಷರಕ್ಕಿಳಿಸಿದ್ದಾರೆ.

- Advertisement -
spot_img

Latest News

error: Content is protected !!