Monday, June 8, 2026
Homeಕೊಡಗುಸಚಿವ ಸ್ಥಾನಕ್ಕಾಗಿ ನಾಳೆ ಬೆಂಗಳೂರಿಗೆ ಬೈಕ್ ಯಾತ್ರೆ!

ಸಚಿವ ಸ್ಥಾನಕ್ಕಾಗಿ ನಾಳೆ ಬೆಂಗಳೂರಿಗೆ ಬೈಕ್ ಯಾತ್ರೆ!

- Advertisement -
- Advertisement -

ಮಡಿಕೇರಿ: ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ನಾಳೆ ಬೈಕ್ ರ್ಯಾಲಿ ನಡೆಯಲಿದೆ.
ನಾಳೆ ಕೊಡಗಿನಿಂದ‌ ಬೆಂಗಳೂರಿಗೆ ಬೈಕ್ ರಾಲಿ ನಡೆಯಲಿದ್ದು ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಒತ್ತಾಯ ಮಾಡಲಿದ್ದಾರೆ.

ಕುಶಾಲನಗರದಿಂದ‌ ಬೈಕ್ ರಾಲಿ ನಡೆಸಲಿರುವ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ‌ಮಾಡಿ‌ ಮನವಿ ಸಲ್ಲಿಸಲಿದ್ದಾರೆ. ನಾಳೆ ತೆರಳಲು ಕುಶಾಲನಗರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಚಿವ ಸ್ಥಾನ ನೀಡುವಂತೆ ಐದು ಬಾರಿಯ ಶಾಸಕ ಅಪ್ಪಚ್ಚು ರಂಜನ್ ತೀವ್ರ ಒತ್ತಡ ಹೇರಿದ್ದರು. ಕೊಡಗು ‌ಜಿಲ್ಲೆಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು.

- Advertisement -

Latest News

error: Content is protected !!