Wednesday, May 15, 2024
Homeತಾಜಾ ಸುದ್ದಿಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಹೇಗಿರಲಿದೆ ಗೊತ್ತಾ?

ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಹೇಗಿರಲಿದೆ ಗೊತ್ತಾ?

spot_img
- Advertisement -
- Advertisement -

ಮಂಗಳೂರು: ಇಂದು ಎಸ್ ಎಸ್ ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ವಿಶೇಷವಾಗಿ ಪರೀಕ್ಷೆ‌ ನಡೆದಿದೆ. ಇದೇ ಮೊದಲ ಬಾರಿಗೆ ಎಸ್ ಎಸ್ ಎಲ್‌ಸಿ‌ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ನಡೆದಿದ್ದು ಪ್ರತಿ ವರ್ಷ ದಂತೆ ಈ ವರ್ಷ ಕೂಡ ಅಂಕಗಳ ನಿಗದಿಯಾಗಲಿದೆ. ಈ ವರ್ಷ ವಿದ್ಯಾರ್ಥಿ ಪಡೆದ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ನಡೆಯಲಿದೆ.

ಅಂಕಗಳ ಜೊತೆಗೆ ಈ ವರ್ಷ ಗ್ರೇಡಿಂಗ್ ಕೂಡಾ ಇರಲಿದೆ‌. ಎ, ಎ+, ಬಿ, ಬಿ+, ಸಿ, ಸಿ+ ಗ್ರೇಡಿಂಗ್ ಇರಲಿದೆ. 562 ರಿಂದ 625 ಅಂಕ ಬಂದ್ರೆ ಎ+ ಗ್ರೇಡ್, 500 ರಿಂದ 561 ಅಂಕ ಬಂದ್ರೆ ಎ ಗ್ರೇಡ್, 437 ರಿಂದ 499 ಅಂಕ ಬಂದ್ರೆ ಬಿ+ ಗ್ರೇಡ್, 375 ರಿಂದ 436 ಅಂಕ ಬಂದ್ರೆ ಬಿ ಗ್ರೇಡ್, 312 ರಿಂದ 374 ಅಂಕ ಬಂದ್ರೆ ಸಿ+ ಗ್ರೇಡ್, 219 ರಿಂದ 311 ಅಂಕ ಬಂದ್ರೆ ಸಿ ಗ್ರೇಡ್ ದೊರೆಯಲಿದೆ.

35 ಅಂಕಗಳಿಗಿಂತ ಕಡಿಮೆ‌ ಪಡೆದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಪಾಸ್ ಘೋಷಣೆ ಮಾಡಲಾಗುತ್ತದೆ. ಆದರೆ ಪಾಸ್ ಅಂಕಗಳಿಗಿಂತ‌ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡುವುದಿಲ್ಲ. ವಿದ್ಯಾರ್ಥಿ ಪಡೆದ ಅಂಕ ದ್ವಿಗುಣಗೊಳಿಸಿ, ಜೊತೆಗೆ ಇಂಟರ್ನಲ್ ಅಂಕ 20, ಭಾಷಾ ವಿಷಯಕ್ಕೆ 25 ಅಂಕ ಪರಿಗಣಿಸಿ ಒಟ್ಟು ಅಂಕದ ಮೂಲಕ ಫಲಿತಾಂಶ ಪ್ರಕಟ‌ ಮಾಡಲಾಗುತ್ತದೆ.

ಅಂಕ ತೃಪ್ತಿಕರವಾಗಿಲ್ಲದಿದ್ದರೆ ಪಿಯುಸಿ ಮಾದರಿಯಲ್ಲಿ ಮಕ್ಕಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ.

- Advertisement -
spot_img

Latest News

error: Content is protected !!