Saturday, June 13, 2026
Homeತಾಜಾ ಸುದ್ದಿಮಾರ್ಕೆಟ್ ನಲ್ಲಿ ಸೊಪ್ಪು, ತರಕಾರಿಗಳು ಫ್ರೆಶ್ ಆಗಿವೆ ಅಂತಾ ಖರೀದಿಸುವವರು ಈ ಸ್ಟೋರಿ ಓದಲೇಬೇಕು: ಬೆಚ್ಚಿ...

ಮಾರ್ಕೆಟ್ ನಲ್ಲಿ ಸೊಪ್ಪು, ತರಕಾರಿಗಳು ಫ್ರೆಶ್ ಆಗಿವೆ ಅಂತಾ ಖರೀದಿಸುವವರು ಈ ಸ್ಟೋರಿ ಓದಲೇಬೇಕು: ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ…

- Advertisement -
- Advertisement -

ಮಂಗಳೂರು: ಮಾರುಕಟ್ಟೆ ತರಕಾರಿಗಳನ್ನು ಕೊಳ್ಳುವಾಗ ನಾವು ಫ್ರೆಶ್ ಇದ್ದರಷ್ಟೇ ಕೊಳ್ಳುತ್ತೇವೆ. ಸೊಪ್ಪುಗಳು ತಾಜಾ ಇದ್ದರೆ ಒಂದು ಕಟ್ಟು ಕೊಳ್ಳೋಕೆ ಹೋದವರು ಎರಡು ಕಟ್ಟು ತೆಗೆದುಕೊಂಡು ವ್ಹಾ ಇವತ್ತು ಫ್ರೆಶ್ ಸೊಪ್ಪು ಸಿಕ್ಕಿತು ಎಂದು ಖುಶಿ ಪಡುತ್ತೇವೆ.

ಆದರೆ ಈ ತಾಜಾ ಸೊಪ್ಪುಗಳ ಹಿಂದಿನ ಅಸಲಿ ಕಹಾನಿಯನ್ನು ನೋಡಿದ್ರೆ. ಇನ್ಮೇಲೆ ಸೊಪ್ಪು ಸಹವಾಸ ಬೇಡ ಎಂದು ನೀವು ಅಂದುಕೊಳ್ಳಬಹುದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಮಾರ್ಕೆಟ್ ನಲ್ಲಿ ಸೊಪ್ಪನ್ನು ತಾಜಾವಾಗಿರಿಸಲು ಅವರು ಅದನ್ನು ಯಾವ ರೀತಿ ಕೆಮಿಕಲ್ ನಲ್ಲಿ ಅದ್ದುತ್ತಾರೆ. ಅದ್ದಿದ ಬಳಿಕ ಕೆಲನವೇ ನಿಮಿಷಗಳಲ್ಲಿ ಬಾಡ ಬೆಂಡಾಗಿ ಹೋಗಿದ್ದ ಸೊಪ್ಪು ಯಾವ ರೀತಿ ಫ್ರೆಶ್ ಆಗುತ್ತೆ ಅನ್ನೋದನ್ನು ನೋಡಬಹುದು.

ನಿಜಕ್ಕೂ ಈ ವಿಡಿಯೋ ನೋಡಿದ್ಮೇಲೆ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಖರೀದಿಸುವಾಗ ನಾವು ಹತ್ತಾರು ಬಾರಿ ಯೋಚಿಸುವಂತಾಗಿದೆ. ದುಡ್ಡಿನ ಆಸೆಗೆ ಮನುಷ್ಯರು ಇನ್ನೊಬ್ಬರ ಜೀವದ ಜೊತೆ ಹೇಗೆಲ್ಲಾ ಆಟ ಆಡುತ್ತಾರೆ ಅನ್ನೋದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ…

- Advertisement -

Latest News

error: Content is protected !!