Wednesday, May 15, 2024
Homeಕರಾವಳಿಹೋಳಿಗೆ ಪ್ರಿಯರಿಗೊಂದು ಸಿಹಿ ಸುದ್ದಿ : ಇನ್ಮೇಲೆ ಅಡಿಕೆಯಿಂದಲೂ ತಯಾರಿಸಬಹುದು ಹೋಳಿಗೆ

ಹೋಳಿಗೆ ಪ್ರಿಯರಿಗೊಂದು ಸಿಹಿ ಸುದ್ದಿ : ಇನ್ಮೇಲೆ ಅಡಿಕೆಯಿಂದಲೂ ತಯಾರಿಸಬಹುದು ಹೋಳಿಗೆ

spot_img
- Advertisement -
- Advertisement -

ಮಂಗಳೂರು : ಕರಾವಳಿಯ ಯಾವುದೇ ಶುಭ ಸಮಾರಂಭವಿರಲಿ ಊಟದ ಮೆನುವಿನಲ್ಲಿ ಹೋಳಿಗೆ ಇಲ್ಲ ಅಂದ್ರೆ ಏನೋ ಮಿಸ್ಸಿಂಗ್ ಅನ್ನೋ ಫೀಲಿಂಗ್. ಕರಾವಳಿಗೂ ಹೋಳಿಗೆಗೂ ಏನೋ ಒಂಥರಾ ಅವಿನಾಭಾವ ಸಂಬಂಧ.ಇಂತಹ ಹೋಳಿಗೆ ಪ್ರಿಯರಿಗೆ ಹಾಗೂ ಅಡಿಕೆ ಬೆಳೆಗಾರರಿಗೆ ಒಂದು ಸೂಪರ್ ಸುದ್ದಿ ಇಲ್ಲಿದೆ.

ಹೌದು.. ವಿಷ್ಯ ಏನಪ್ಪಾ ಅಂದ್ರೆ ಈಗ ನೀವು ಅಡಿಕೆಯಿಂದಲೂ ಹೋಳಿಗೆಯನ್ನು ತಯಾರಿಸಬಹುದು. ಪುತ್ತೂರಿನ ಗುರಿಮೂಲೆ ನಿವಾಸಿ, ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಎಂಬವರು ಇದನ್ನು ತೋರಿಸಿಕೊಟ್ಟಿದ್ದಾರೆ. ಕಳೆದ ವರ್ಷ ಬದಿಯಡ್ಕ ಬಳಿಯ ಸುದರ್ಶನ್ ಬೆದ್ರಾಡಿ ಎಂಬವರು ಅಡಕೆಯಿಂದ ಲಡ್ಡು ತಯಾರಿಸಿದ್ದರು. ಅಡಕೆಯಿಂದ ಚಾಕಲೇಟ್, ಪೇಯ, ಕಾಜು ಸುಪಾರಿ ಹೀಗೆ ನಾನಾ ಮೌಲ್ಯವರ್ಧಿತ ಸಿಹಿ ಉತ್ಪನ್ನ ಮಾರುಕಟ್ಟೆಕಂಡಿದೆ. ಕೋಕೋ ಉತ್ಪನ್ನದಿಂದ ಚಾಕಲೇಟ್, ಪೇಯ ಕೂಡ ತಯಾರಿಸಲಾಗಿದೆ. ಅಡಕೆ ಹೋಳಿಗೆ ಇಷ್ಟರಲ್ಲೇ ಖಾಸಗಿಯಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಡಿಕೆ ಹೋಳಿಗೆ ಮಾಡುವುದು ಹೇಗೆ?

ಅಡಿಕೆ ಹೋಳಿಗೆಗೆ 2 ವರ್ಷ ಹಿಂದಿನ ಹಳೆ ಅಡಿಕೆ(ಡಬ್ಬಲ್ ಚೋಲ್) ಅತ್ಯುತ್ತಮ. ಹಳೆ ಅಡಿಕೆಯನ್ನು ಸಣ್ಣ ತುಂಡು ಮಾಡಿ ತುಪ್ಪದ ಜೊತೆ ಮಿಕ್ಸಿಯಲ್ಲಿ ಅರೆದು ನೀರು ಹಾಕಿ ಬೇಯಿಸಬೇಕು. ಬಳಿಕ ರವೆಯನ್ನು ಮಿಶ್ರಣ ಮಾಡಿ ಸಕ್ಕರೆ ಪಾಕ ಸೇರಿಸಿ ಉಂಡೆ ಕಟ್ಟಿ ಕನಕ ಜೊತೆ ಹೋಳಿಗೆ ತಯಾರಿಸಿದ್ದಾರೆ. ಇದನ್ನು ಪ್ರಾಯೋಗಿಕವಾಗಿ ಮಾಡಿದ್ದು, 250 ಗ್ರಾಂ ಹಳೆ ಅಡಿಕೆ ಬಳಸಿ 52 ಹೋಳಿಗೆ ತಯಾರಿಸಲಾಗಿದೆ. ಅಡಿಕೆ ಹೋಳಿಗೆ ತಯಾರಿಸಲು ಹಳೆ ಅಡಕೆಯನ್ನು ಪುಡಿ ಮಾಡುವುದು ಸುಲಭವಲ್ಲ. ಅಡಕೆ ಪುಡಿ ಮಾಡುವ ಯಂತ್ರವೊಂದು ಲಭಿಸಿದರೆ, ಅಡಿಕೆ  ಹೋಳಿಗೆಯನ್ನು ಸುಲಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಸಾಧ್ಯ ಎಂದಿದ್ದಾರೆ ಪಾಕತಜ್ಞ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ.

- Advertisement -
spot_img

Latest News

error: Content is protected !!