Saturday, June 6, 2026
Homeಇತರಸಿಡಿ ಕೇಸ್ ಆರೋಪಿ‌ ಈಗ ಯುವ ಕಾಂಗ್ರೆಸ್ ಮುಖಂಡ!

ಸಿಡಿ ಕೇಸ್ ಆರೋಪಿ‌ ಈಗ ಯುವ ಕಾಂಗ್ರೆಸ್ ಮುಖಂಡ!

- Advertisement -
- Advertisement -

ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನಲ್ಲಿ ಆರೋಪಿಯಾಗಿ ಕಾಣಿಸಿಕೊಂಡಿದ್ದ ನರೇಶ್ ಗೌಡ ‌ಈಗ ಯುವ ಕಾಂಗ್ರೆಸ್ ಯುವ ಮುಖಂಡ!. ನರೇಶ್ ಗೌಡ ಸಿಡಿ ಕೇಸ್ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸ್ವಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ನರೇಶ್ ಗೌಡ ಹುಟ್ಟೂರಾದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ಹೂವಿನ ಹಾರ ಕಟ್ಟಿ, ಪಟಾಕಿ ಸಿಡಿಸಿ, ಬ್ಯಾನರ್ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ನರೇಶ್ ಗೌಡಗೆ ಸುಸ್ವಾಗತ ಎಂಬ ಬೋರ್ಡ್ ಸ್ವಗ್ರಾಮದಲ್ಲಿ ರಾರಾಜಿಸುತ್ತಿದೆ.‌ ಗ್ರಾಮದಲ್ಲಿ ಜೆಸಿಬಿ ಮೂಲಕ‌‌ ಹೂವಿನ ಮಳೆ ಸುರಿಸಿ ನರೇಶ್ ಗೌಡಗೆ ಸ್ವಾಗತಿಸಲಾಗಿದೆ.‌

- Advertisement -

Latest News

error: Content is protected !!