Thursday, June 4, 2026
Homeಕರಾವಳಿಕಡಬದಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಪ್ರಕರಣ : ಮಾತುಕತೆಯ ಮೂಲಕ ಪ್ರಕರಣ ಸುಖಾಂತ್ಯ

ಕಡಬದಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಪ್ರಕರಣ : ಮಾತುಕತೆಯ ಮೂಲಕ ಪ್ರಕರಣ ಸುಖಾಂತ್ಯ

- Advertisement -
- Advertisement -

ಕಡಬ: ಇಲ್ಲಿನ ತಹಶಿಲ್ದಾರ್ ಕಚೇರಿ ಸಮೀಪ ಜುಲೈ 17 ರಂದು ದ್ವಿ ಚಕ್ರ ವಾಹನಗಳೆರಡರ ನಡುವೆ ಅಪಘಾತ ನಡೆದಿತ್ತು. ಇದೀಗ ಈ ಪ್ರಕರಣ ಮಾತುಕತೆಯ ಮೂಲಕ ಇತ್ಯರ್ಥ ಗೊಂಡಿದೆ.

ಅಪಘಾತ ನಡೆದ ವೇಳೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು‌ .ಈ ವೇಳೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಸವಾರೆಯೊಬ್ಬರು ವಾಹನ ನಿಲ್ಲಿಸದೆ ,ಅಪಘಾತಗೊಂಡು ರಸ್ತೆಯಲ್ಲಿ ಬಿದ್ದವರನ್ನು ಉಪಚರಿಸಲು ಮುಂದಾಗದೆ ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ  ಜನರು ಆಕ್ರೋಶ ಹೊರ ಹಾಕಿ” ಮಾನವೀಯತೆ ಇಲ್ಲದ ನಾರಿ” ಎಂದು ಕಮೆಂಟ್ ಹಾಕಿದ್ದಾರೆ.

ಅಪಘಾತದ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದು ಅದರಲ್ಲಿ ಸವಾರೆಯೊಬ್ಬರು ಅಪಘಾತಗೊಂಡವರನ್ನು ನೋಡಿಯೂ ಹೋಗುತ್ತಿರುವುದು ಸೆರೆಯಾಗಿತ್ತು. ಇದೀಗ ಪ್ರಕರಣ ಮಾತುಕತೆಯ ಮೂಲಕ ಇತ್ಯರ್ಥಗೊಂಡಿದೆ.

- Advertisement -

Latest News

error: Content is protected !!