Saturday, June 6, 2026
Homeಕೊಡಗುಕೊಡಗಿನಲ್ಲಿ ಮಳೆಯಿಂದಾಗಿ ವೃದ್ಧ‌ ನೀರುಪಾಲು

ಕೊಡಗಿನಲ್ಲಿ ಮಳೆಯಿಂದಾಗಿ ವೃದ್ಧ‌ ನೀರುಪಾಲು

- Advertisement -
- Advertisement -

ಮಡಿಕೇರಿ: 2021ರ ಮಹಾಮಳೆಗೆ ಕೊಡಗು ಜಿಲ್ಲೆಯಲ್ಲಿ ವೃದ್ಧರೊಬ್ಬರು ನೀರು ಪಾಲಾಗಿದ್ದಾರೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಕಿರು ಹೊಳೆಯಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಎಪ್ಪತ್ತು ವರ್ಷದ ಬೊಮ್ಮೇಗೌಡನ ಬಾಬಿ ಎಂಬವರು ಹೊಳೆಯಲ್ಲಿ ಕೊಚ್ಚಿಹೋದ ವೃದ್ಧರಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಅವ್ವಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.‌ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹೊಳೆ ದಾಟುವಾಗ ಬಾಬಿ ಕೊಚ್ಚಿ ಹೋಗಿದ್ದಾರೆ.‌

ಘಟನೆ ನಡೆದ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ಬಾಬಿ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ. ಆದರೆ ಬಿಡುವು ನೀಡದೇ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆ ಜನರನ್ನು ಆತಂಕಕ್ಕೆ ದೂಡಿದೆ.

- Advertisement -

Latest News

error: Content is protected !!