Thursday, August 20, 2026
Homeಕರಾವಳಿಕಾರ್ಕಳದಲ್ಲಿ ಸಾವಿನಲ್ಲೂ ಒಂದಾದ ಅಣ್ಣ-ತಮ್ಮ: ಬೆಳಗ್ಗೆ ತಮ್ಮ ನಿಧನ ಸಂಜೆ ಅಣ್ಣನೂ ವಿಧಿವಶ

ಕಾರ್ಕಳದಲ್ಲಿ ಸಾವಿನಲ್ಲೂ ಒಂದಾದ ಅಣ್ಣ-ತಮ್ಮ: ಬೆಳಗ್ಗೆ ತಮ್ಮ ನಿಧನ ಸಂಜೆ ಅಣ್ಣನೂ ವಿಧಿವಶ

- Advertisement -
- Advertisement -

ಕಾರ್ಕಳ : ಅಣ್ಣ-ತಮ್ಮ ಸಾವಿನಲ್ಲೂ ಒಂದಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಇಲ್ಲಿನ ಸಾಣೂರು ನಿವಾಸಿ ಮಿಯಾರು ಗುಂಡಾಜೆ ಬಳಿಯ ರಾಜಾರಾಮ. ರಾವ್ (55) ಇಂದು ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಮೃತ ಪಟ್ಟರೆ, ಸಹೋದರ ಸಾಣೂರು ಚಿಕ್ಕಬೆಟ್ಟು ನಿವಾಸಿ ಗಣೇಶ್ ರಾವ್ (60) ಸಂಜೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ.

ರಾಜರಾಮ್ ರಾವ್ ಅವರು ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಮಣಿಪಾಲ ಇನ್ನಿತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಂತಿಮವಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೃತ ಪಟ್ಟಿದ್ದಾರೆ.

ಹಿರಿಯ ಸಹೋದರ ಗಣೇಶ್ ರಾವ್, ಚಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಂಜೆ 5 ಗಂಟೆಯ ಸುಮಾರಿಗೆ ಅವರು ಮೃತ ಪಟ್ಟಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಕುಟುಂಬ ಸದಸ್ಯರ ಜೊತೆ ವಾಸವಿದ್ದರು. ಮೃತರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!