Thursday, June 4, 2026
Homeಕರಾವಳಿವಿಟ್ಲ: ತಂದೆಯ ಅಂತ್ಯಕ್ರಿಯೆ ವೇಳೆ ಕುಸಿದು ಬಿದ್ದು ಮಗ ಸಾವು

ವಿಟ್ಲ: ತಂದೆಯ ಅಂತ್ಯಕ್ರಿಯೆ ವೇಳೆ ಕುಸಿದು ಬಿದ್ದು ಮಗ ಸಾವು

- Advertisement -
- Advertisement -

ವಿಟ್ಲ: ತಂದೆಯ ಅಂತ್ಯಕ್ರಿಯೆ ವೇಳೆ ಮಗ ಕೂಡ ಮೃತಪಟ್ಟ ಘಟನೆ ಪುಣಚ ಗ್ರಾಮದ ಬೈಲುಗುತ್ತಿನಲ್ಲಿ ವರದಿಯಾಗಿದೆ.

ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ನಿವೃತ್ತ ಕೆ.ಪಿ.ಟಿ. ಪ್ರೊಫೆಸರ್ ಭುಜಂಗ ಶೆಟ್ಟಿ (87) ಕೋವಿಡ್‌ನಿಂದ ಮರಣ ಹೊಂದಿದ್ದರು. ಬುಧವಾರ ತಂದೆಯ ಅಂತ್ಯಕ್ರಿಯೆ ಸಂದರ್ಭ ಪುತ್ರ ಶೈಲೇಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿ ಸೇರಿದ್ದವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಶೈಲೇಶ್ ಅವರನ್ನು ಕರೆತಂದರು.

ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಲೋ ಬಿಪಿ ಘಟನೆಗೆ ಕಾರಣ ಎನ್ನಲಾಗಿದೆ. ತಂದೆ ಮತ್ತು ಮಗ ಒಂದೇ ದಿನ ಸಾವನ್ನಪ್ಪಿದ್ದು ಸ್ಥಳೀಯರಿಗೆ ಆಘಾತ ತಂದಿದೆ.

- Advertisement -

Latest News

error: Content is protected !!