Tuesday, June 9, 2026
Homeಕರಾವಳಿಮೂಡುಬಿದಿರೆ: ತಂಬಾಕು ಮುಕ್ತ ಶಾಲಾ ಆವರಣ ಗುಲಾಬಿ ಅಭಿಯಾನ ಕಾರ್ಯಕ್ರಮ

ಮೂಡುಬಿದಿರೆ: ತಂಬಾಕು ಮುಕ್ತ ಶಾಲಾ ಆವರಣ ಗುಲಾಬಿ ಅಭಿಯಾನ ಕಾರ್ಯಕ್ರಮ

- Advertisement -
- Advertisement -

ಮೂಡುಬಿದಿರೆ: ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರ ಬೆಳುವಾಯಿ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂದು ತಂಬಾಕು ಮುಕ್ತ ಶಾಲಾ ಆವರಣ ಗುಲಾಬಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಾಥಾ ನಡೆಸಲಾಯಿತು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹತ್ತಿರದ ಅಂಗಡಿಗಳಿಗೆ ತೆರಳಿ 14 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಯುಕ್ತ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಜಾಗೃತಿ ಮೂಡಿಸಿದರು ಮತ್ತು ಶಾಲೆಯಿಂದ 100ಮೀಟರ್ ಒಳಗೆ ತಂಬಾಕು ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಪೋಷಕರು ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ಭಾಗವಹಿಸಿದ್ದರು.

- Advertisement -

Latest News

error: Content is protected !!