Thursday, August 27, 2026
Homeಕ್ರೀಡೆಪ್ರಖ್ಯಾತ ಕ್ರೀಡಾಪಟು ಪಿ.ಟಿ. ಉಷಾರವರ ದಾಖಲೆಯನ್ನ ಮುರಿದ ಕೊಡಗಿನ 'ಉನ್ನತಿ ಅಯ್ಯಪ್ಪ'

ಪ್ರಖ್ಯಾತ ಕ್ರೀಡಾಪಟು ಪಿ.ಟಿ. ಉಷಾರವರ ದಾಖಲೆಯನ್ನ ಮುರಿದ ಕೊಡಗಿನ ‘ಉನ್ನತಿ ಅಯ್ಯಪ್ಪ’

- Advertisement -
- Advertisement -

ಕೊಡಗು: ಗುವಾಹಟಿಯಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಅಥ್ಲೆಟಿಕ್​ ಚಾಂಪಿಯನ್​ ಶಿಪ್​ನಲ್ಲಿ ಕೊಡಗಿನ ಉನ್ನತಿ ಅಯ್ಯಪ್ಪ ರನ್ನಿಂಗ್​ ವಿಭಾಗದಲ್ಲಿ ಪಿಟಿ ಉಷಾ ಅವರ ದಾಖಲೆಯನ್ನ ಮುರಿದು, ನೂತನ ದಾಖಲೆಯನ್ನ ಸೃಷ್ಠಿಸಿದ್ದಾರೆ.

36ನೇ ರಾಷ್ಟ್ರೀಯ ಅಥ್ಲೆಟಿಕ್​ ಚಾಂಪಿಯನ್​ ಶಿಪ್​ನಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿದ್ದ ಉನ್ನತಿ, ಫೆಬ್ರವರಿ 8 ರಂದು 80 ಮೀಟರ್ ಹರ್ಡಲ್ಸ್ ಹಾಗೂ ಫೆಬ್ರವರಿ 9 ರಂದು ನಡೆದ 300 ಮೀಟರ್ ಹರ್ಡಲ್ಸ್‌ನಲ್ಲಿ ಹೊಸ ದಾಖಲೆ ಮಾಡಿದ್ದಾಳೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಉನ್ನತಿ ಅಯ್ಯಪ್ಪ 80 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ 11.50 ಸೆಕೆಂಡ್ಸ್‌ನಲ್ಲಿ ಗುರಿ ತಲುಪುವ ಮೂಲಕ ನೂತನ ದಾಖಲೆ ಸೃಷ್ಟಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾಳೆ. 300 ಮೀಟರ್ಸ್ ಹರ್ಡಲ್ಸ್‌ನಲ್ಲೂ 40.11 ಸೆಕೆಂಡ್‌ನಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗಳಿಸಿದ್ದಾಳೆ.

11.50 ಸೆಕೆಂಡ್​ನಲ್ಲಿ ಗುರಿ ಮುಟ್ಟುವ ಮೂಲಕ ಭಾರತೀಯ ಪ್ರಖ್ಯಾತ ಕ್ರೀಡಾ ಪಟು ಪಿ.ಟಿ. ಉಷಾರವರ ದಾಖಲೆಯನ್ನ ಮುರಿದಿದ್ದಾರೆ. ಹೌದು, ಪಿ.ಟಿ. ಉಷಾ ಅವ್ರು 12.2 ಸೆಕೆಂಡ್​ಗಳಲ್ಲಿ ತಮ್ಮ ಗುರಿತಲುಪಿದ್ದರು. ಉನ್ನತಿಯ ತಾಯಿ ಪ್ರಮೀಳಾ (ಜಿ.ಜಿ. ಪ್ರಮೀಳಾ) ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಕ್ರೀಡಾಪಟುವಾಗಿದ್ದಾರೆ. ಉನ್ನತಿಗೆ ಆಕೆಯ ತಂದೆ ಅಯ್ಯಪ್ಪ ಅವರೇ ತರಬೇತಿ ನೀಡಿರುವುದು ವಿಶೇಷವಾಗಿದೆ.

- Advertisement -

Latest News

error: Content is protected !!