Monday, August 31, 2026
Homeಕರಾವಳಿವಿಟ್ಲದಲ್ಲಿ ಕೊಕ್ಕೊ ಗಿಡ ಕಡಿಯುವ ವಿಚಾರಕ್ಕೆ ಜಗಳ: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನ...

ವಿಟ್ಲದಲ್ಲಿ ಕೊಕ್ಕೊ ಗಿಡ ಕಡಿಯುವ ವಿಚಾರಕ್ಕೆ ಜಗಳ: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನ ಆರೋಪ

- Advertisement -
- Advertisement -

ವಿಟ್ಲ:  ಕೊಕ್ಕೊ ಗಿಡ ಕಡಿದ ವಿಚಾರವಾಗಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ವಿಟ್ಲದ ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಮಹಿಳೆಯೋರ್ವರ ಮನೆ ಬಳಿ ಇದ್ದ ಕೊ ಕ್ಕೋ ಗಿಡವನ್ನು ಆರೋಪಿ ಜಯರಾಮ ಎಂಬಾತ ಕಡಿಯುತ್ತಿರುವಾಗ ಮಹಿಳೆ ನೀನು ಕೊ ಕ್ಕೋ ಗಿಡವನ್ನು ಯಾಕೆ ಕಡಿಯುತ್ತಿದ್ದಿ ಎಂದು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ಕತ್ತಿಯನ್ನು ಮಹಿಳೆ ಕಡೆಗೆ ಬೀಸಿದಾಗ ತಪ್ಪಿಸಿಕೊಳ್ಳಲು ಮುಂದಾದಾಗ ಮಹಿಳೆಯು ಬದಿಯಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಯ ಸೊಂಟ, ತಲೆ ಹಾಗೂ ಮೈ ಕೈಗೆ ಗುದ್ದಿದ ಗಾಯವಾಗಿದೆ.

ಬಳಿಕ ನೆಲದಿಂದ ಏಳುವಾಗ ಆರೋಪಿಯು ಮಹಿಳೆಯ ಕೆನ್ನೆಗೆ ಹೊಡೆದು ದೂಡಿ ಹಾಕಿ ಎಳೆದು ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ವಿಟ್ಲ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!