Friday, April 26, 2024
Homeಕ್ರೀಡೆಮಗಳಿಗೆ ಅನುಷ್ಕಾ- ವಿರಾಟ್ ದಂಪತಿ ಇಟ್ಟ ಹೆಸರೇನು ಗೊತ್ತಾ? ಮೊದಲ ಬಾರಿಗೆ ಮಗುವಿನ ಫೋಟೋ ಹಂಚಿಕೊಂಡ...

ಮಗಳಿಗೆ ಅನುಷ್ಕಾ- ವಿರಾಟ್ ದಂಪತಿ ಇಟ್ಟ ಹೆಸರೇನು ಗೊತ್ತಾ? ಮೊದಲ ಬಾರಿಗೆ ಮಗುವಿನ ಫೋಟೋ ಹಂಚಿಕೊಂಡ ವಿರುಷ್ಕಾ ಜೋಡಿ

spot_img
- Advertisement -
- Advertisement -

ಹೊಸದಿಲ್ಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಕಳೆದ ತಿಂಗಳ 11 ರಂದು ಮುದ್ದಾದ ಹೆಣ್ಣು ಮಗುವಿನ ಹೆತ್ತವರಾಗಿದ್ದರು.  ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಮಗುವಿಗೆ ‘ವಮಿಕಾ ‘ ಎಂದು ಹೆಸರಿಟ್ಟಿದ್ದಾಗಿ ದಂಪತಿ ಘೋಷಣೆ ಮಾಡಿಕೊಂಡಿದ್ದಾರೆ. ಅನುಷ್ಕಾ ಮಗುವನ್ನು ಹಿಡಿದುಕೊಂಡಿರುವ, ವಿರಾಟ್ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಫೋಟೋದ ಜೊತೆಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ. ನಾವಿಬ್ಬರು ಪ್ರೀತಿಯಿಂದ ಕೃತಜ್ಞತಾ ಭಾವದೊಂದಿಗೆ ವಾಸಿಸುತ್ತಿದ್ದೆವು. ಇದೀಗ ಪುಟ್ಟ ವಮಿಕಾ ನಮ್ಮನ್ನು ಮತ್ತೊಂದು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾಳೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!