Sunday, May 5, 2024
Homeಕರಾವಳಿಬಂಗಾರಪಲ್ಕೆ ಫಾಲ್ಸ್‌ ದುರಂತ: 7ನೇ ದಿನದ ಶೋಧ ಕಾರ್ಯವೂ ವಿಫ‌ಲ, ಮುಗಿಲು ಮುಟ್ಟಿದ್ದ ಮನೆಯವರ ಆಕ್ರಂದನ

ಬಂಗಾರಪಲ್ಕೆ ಫಾಲ್ಸ್‌ ದುರಂತ: 7ನೇ ದಿನದ ಶೋಧ ಕಾರ್ಯವೂ ವಿಫ‌ಲ, ಮುಗಿಲು ಮುಟ್ಟಿದ್ದ ಮನೆಯವರ ಆಕ್ರಂದನ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ. 25ರಂದು ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿದ ಕಾಲೇಜು ವಿದ್ಯಾರ್ಥಿಯ ದೇಹಕ್ಕಾಗಿ ನಡೆಸುತ್ತಿರುವ ಶೋಧ ಕಾರ್ಯ ಏಳನೇ ದಿನವೂ ಪೂರ್ಣಗೊಂಡಿದ್ದು ಯಾವುದೇ ಕುರುಹು ಲಭ್ಯವಾಗಿಲ್ಲ.

ಉಜಿರೆಯ ಕಾಶಿಬೆಟ್ಟು ನಿವಾಸಿ ಮತ್ತು ಎಸ್.ಡಿ .ಎಂ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸನತ್ ಶೆಟ್ಟಿ (20)ಯವರ ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದ್ದರೂ ಮಗನ ಪತ್ತೆಯಾಗದಿರುವುದು ಹೆತ್ತವರ ಆಂಕ್ರಂದನವನ್ನು ಹೆಚ್ಚಿಸಿದೆ. ‘ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ’ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದಾರೆ.

ದೇಹವು ಕೆಳಸ್ಥರದ ಬಂಡೆಗಳಡಿ ಸಿಲುಕಿರುವ ಸಾಧ್ಯತೆ ಇದೆಯಂದು ಅಲ್ಲಿಂದ ಸಂಪೂರ್ಣ ಮಣ್ಣು ತೆರವುಗೊಳಿಸಿದರೂ ಪ್ರಯೋಜನವಾಗಿಲ್ಲ. ಘಟನೆ ನಡೆದ ಸ್ಥಳದಲ್ಲಿನ ಪರಿಸರದ ಹಲವು ಕಿ.ಮೀ.ವ್ಯಾಪ್ತಿಯ ವರೆಗೂ ಮೊಬೈಲ್ ನೆಟ್ ವರ್ಕ್ ಇಲ್ಲದಿರುವುದು ಮಾಹಿತಿ ಹಾಗೂ ಸಂವಹನಕ್ಕೆ ಭಾರಿ ಸಮಸ್ಯೆಯಾಗಿದೆ.

- Advertisement -
spot_img

Latest News

error: Content is protected !!