Thursday, June 4, 2026
Homeತಾಜಾ ಸುದ್ದಿವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ

- Advertisement -
- Advertisement -

ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಮನೆಯಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಅವರ ಪುತ್ರಿಯ ವಿವಾಹ. ಹೌದು. ರಮೇಶ್ ಅವರ​ ಪುತ್ರಿ ನಿಹಾರಿಕ ತಮ್ಮ ಸಹೋದ್ಯೋಗಿ  ಅಕ್ಷಯ್ ಎಂಬವರ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ.

ನಿಹಾರಿಕ ಹಾಗೂ ಅಕ್ಷಯ್ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಈಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕೊರೊನಾ ಸಾಂಕ್ರಾಮಿಕದ ಕಾರಣ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ಸರಳವಾಗಿ ನಿಹಾರಿಕ ಹಾಗೂ ಅಕ್ಷಯ್ ಅವರ ವಿವಾಹ ನೇರವೇರಿದೆ.

ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ರಮೇಶ್​​ ಆಹ್ವಾನಿಸಿದ್ದಾರೆ.

- Advertisement -

Latest News

error: Content is protected !!