Saturday, May 18, 2024
Homeತಾಜಾ ಸುದ್ದಿಪತ್ನಿಗೆ ಚಂದ್ರನಂಗಳದಲ್ಲಿ ಭೂಮಿ ಖರೀದಿಸಿ ಉಡುಗೊರೆ ನೀಡಿದ ಪತಿರಾಯ

ಪತ್ನಿಗೆ ಚಂದ್ರನಂಗಳದಲ್ಲಿ ಭೂಮಿ ಖರೀದಿಸಿ ಉಡುಗೊರೆ ನೀಡಿದ ಪತಿರಾಯ

spot_img
- Advertisement -
- Advertisement -

ಜೈಪುರ: ವಿಶೇಷ ಸಂದರ್ಭದಲ್ಲಿ ಪತಿ ಪತ್ನಿಗೆ ಬೇರೆ ಬೇರೆ ರೀತಿಯ ಗಿಫ್ಟ್ ಗಳನ್ನು ನೀಡೋದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ವಿವಾಹ ವಾರ್ಷಿಕೋತ್ಸವಕ್ಕಾಗಿ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಹೌದು…ರಾಜಸ್ಥಾನದ ಅಜ್ಮೇರ್​ನ ಧರ್ಮೇಂದ್ರ ಅನಿಜಾ ಅವರು ತನ್ನ 8ನೇ ವಿವಾಹ ವಾಷಿರ್ಕೋತ್ಸವದ ಪ್ರಯಕ್ತ ಪ್ರೀತಿಯ ಪತ್ನಿ ಸಪ್ನಾಗಾಗಿ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿದ್ದಾರೆ.

ಇದೇ ಡಿಸೆಂಬರ್​ 24ರಂದು ವಿವಾಹ ವಾಷಿರ್ಕೋತ್ಸವ ನಡೆದಿದ್ದು, ಚಂದ್ರನ ಮೇಲೆ ಜಾಗ ಖರೀದಿಸಿದ ಪತ್ರಗಳನ್ನು ಪತ್ನಿ ಸಪ್ನಾಗೆ ಧರ್ಮೇಂದ್ರ ಅನಿಜಾ ಹಸ್ತಾಂತರಿಸಿದ್ದಾರೆ. ಸಪ್ನಾಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸಿದ್ದೆ. ಹೀಗಾಗಿ ಚಂದ್ರನಲ್ಲಿ 3 ಎಕರೆ ಭೂಮಿ ಖರೀದಿಸಿ ನೀಡಿದ್ದೇನೆ ಎಂದು ಧರ್ಮೇಂದ್ರ ಅನಿಜಾ ತಿಳಿಸಿದ್ದಾರೆ. ಲೂನಾ ಸೊಸೈಟಿ ಇಂಟರ್​ನ್ಯಾಷನಲ್​ ಮೂಲಕ ಭೂಮಿ ಖರೀದಿಸಿದ್ದಾರೆ.

ಇತ್ತೀಚೆಗೆ ಮೃತಪಟ್ಟ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಕೂಡ 2018ರಲ್ಲಿ ಚಂದ್ರನ ಮೇಲೆ ಜಾಗ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಬೋಧ್​ ಗಯಾ ನಿವಾಸಿ ನೀರಜ್​ ಕುಮಾರ್​ ಎಂಬುವವರೂ ಕೆಲ ತಿಂಗಳ ಹಿಂದೆ ತಮ್ಮ ಜನ್ಮದಿನದ ನಿಮಿತ್ತ ಚಂದ್ರನಲ್ಲಿ 1 ಎಕರೆ ಜಾಗ ಖರೀದಿಸಿ ಸುದ್ದಿಯಾಗಿದ್ದರು.

- Advertisement -
spot_img

Latest News

error: Content is protected !!