Saturday, June 13, 2026
Homeತಾಜಾ ಸುದ್ದಿಆಸ್ತಿ ವಿಚಾರಕ್ಕೆ ಕಲಹ- ಮನನೊಂದು ಆತ್ಮಹತ್ಯೆ ಗೆ ಶರಣಾದ ಯುವಕ!..

ಆಸ್ತಿ ವಿಚಾರಕ್ಕೆ ಕಲಹ- ಮನನೊಂದು ಆತ್ಮಹತ್ಯೆ ಗೆ ಶರಣಾದ ಯುವಕ!..

- Advertisement -
- Advertisement -

ಬೆಂಗಳೂರು:ಇಲ್ಲಿನ ನೆಲಮಂಗಲ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಯುವಕನೋರ್ವ ಆಸ್ತಿ ವಿಚಾರದಲ್ಲಿ ಕುಟುಂಬದೊಂದಿಗೆ ಜಗಳವಾಡಿಕೊಂಡ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನನ್ನು ಚಿರಂಜೀವಿ (28) ಎಂದು ಗುರುತಿಸಲಾಗಿದ್ದು ಈತ ತನ್ನ ಸೋದರ ಮಾವ ಲಕ್ಷ್ಮಣ್ ಎಂಬುವವರ ಮನೆಯಲ್ಲಿ ವಾಸವಿದ್ದ. ಇತ್ತೀಚೆಗೆ ಮನೆಯಲ್ಲಿ ಆಸ್ಥಿ ವಿಚಾರದಲ್ಲಿ ಜಗಳವಾಗಿದೆ. ಅದೇ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮನೆಯ ಕಿಟಕಿಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!