Saturday, June 13, 2026
Homeತಾಜಾ ಸುದ್ದಿಬೇಟೆಗೆ ತೆರಳಿದ ಯುವಕ ಗುಂಡೇಟಿಗೆ ಬಲಿ: ತಮ್ಮನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಅಣ್ಣ ಆರೋಪ

ಬೇಟೆಗೆ ತೆರಳಿದ ಯುವಕ ಗುಂಡೇಟಿಗೆ ಬಲಿ: ತಮ್ಮನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಅಣ್ಣ ಆರೋಪ

- Advertisement -
- Advertisement -

ಮಡಿಕೇರಿ: ಬೇಟೆಯಾಡಲು ತೆರಳಿದ್ದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿರುವ ಮಡಿಕೇರಿ ತಾಲ್ಲೂಕಿನ ಮದೆನಾಡುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತ ಯುವಕನನ್ನು ಮದೆನಾಡು ನಿವಾಸಿ ಪರಮೇಶ್ವರ್‌ ಅಲಿಯಾಸ್‌ ಕೆ ಹೆಚ್‌ ಕಿರಣ್‌ (31) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬುವವರು ಕಾಡು ಪ್ರಾಣಿಗೆಂದು ಹೊಡೆದ ಗುಂಡು ತಗುಲಿ ಕಿರಣ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಆದರೆ ಕಿರಣ್‌ ಅವರ ಸಹೋದರ ಕೆ ಹೆಚ್‌ ಕೀರ್ತಿ ಎಂಬುವವರು ತನ್ನ ಸಹೋದರನನ್ನು ಬೆಳ್ಳಿಯಪ್ಪ ಅವರು ಬೇಟೆಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!