Wednesday, June 3, 2026
Homeಕರಾವಳಿಕೋಡಿಂಬಾಡಿಯಲ್ಲಿ ಆತಂಕ ಮೂಡಿಸಿದ ಚಿರತೆ: ಎರಡನೇ ದಿನವೂ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆ

ಕೋಡಿಂಬಾಡಿಯಲ್ಲಿ ಆತಂಕ ಮೂಡಿಸಿದ ಚಿರತೆ: ಎರಡನೇ ದಿನವೂ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆ

- Advertisement -
- Advertisement -

ಉಪ್ಪಿನಂಗಡಿ:  ಇಲ್ಲಿನ ಕೋಡಿಂಬಾಡಿಯಲ್ಲಿ ಎರಡನೆಯ ದಿನವು ಸಿಸಿ ಕ್ಯಾಮೆರಾ ದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆಯಾಗಿದೆ. ಕೋಡಿಂಬಾಡಿ ನಿವಾಸಿ ಜಿನರಾಜ್ ಜೈನ್ ರವರು ತಮ್ಮ ಮನೆಯ ಗೇಟಿನ ಎದುರು ಅಳವಡಿಸಿದ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.  ಇಂದು ಬೆಳಗ್ಗೆ  ಜಿನರಾಜ್ ಜೈನ್ ರವರು ಮಗ ಹರ್ಷೆಂದ್ರ ಜೈನ್ ಅವರು ಸಿಸಿ ಟಿವಿ ಫೂಟೇಜ್ ನ್ನು ಪರಿಶೀಲಿಸುವಾಗ  ಮುಂಜಾನೆ 3.45 ಸುಮಾರಿಗೆ ಚಿರತೆ ಸುತ್ತಮುತ್ತ ಸಂಚರಿಸಿರುವ ದೃಶ್ಯ ಸೆರೆಯಾಗಿದೆ.

ಇನ್ನು ಸೋಮವಾರ ಮಧ್ಯರಾತ್ರಿ 1.45ರ ವೇಳೆಗೂ ಚಿರತೆ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ  ಸೆರೆಯಾಗಿತ್ತು. ಇನ್ನು ಇಷ್ಟೆಲ್ಲಾ ಆದ್ರೂ ಅರಣ್ಯ ಇಲಾಖೆಯವರು ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest News

error: Content is protected !!