Friday, June 26, 2026
Homeತಾಜಾ ಸುದ್ದಿನಾಯಿಗೆ ಊಟ ಹಾಕಿಲ್ಲವೆಂದು ತಂಗಿಯನ್ನೇ ಶೂಟ್ ಮಾಡಿ ಕೊಂದ ಅಣ್ಣ

ನಾಯಿಗೆ ಊಟ ಹಾಕಿಲ್ಲವೆಂದು ತಂಗಿಯನ್ನೇ ಶೂಟ್ ಮಾಡಿ ಕೊಂದ ಅಣ್ಣ

- Advertisement -
- Advertisement -

ಉತ್ತರಪ್ರದೇಶ : ತಾನು ಸಾಕಿದ್ದ ನಾಯಿಗಳಿಗೆ ಊಟ ಹಾಕಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಆಶಿಶ್ ಸಹೋದರಿಯನ್ನು ಹತ್ಯೆ ಮಾಡಿದ ಪಾಪಿ. ಪಾರೂಲ್ ಕೊಲೆಯಾದ ದುರ್ದೈವಿ.  ಕೊಲೆ ಮಾಡಿದ ಬಳಿಕ ಈತ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಾಣಿ ಪ್ರೇಮಿಯಾಗಿರುವ ಆಶಿಶ್, ಹಲವು ನಾಯಿಗಳನ್ನು ಸಾಕಿಕೊಂಡಿದ್ದ. ಈ ನಾಯಿಗಳಿಗೆ ಊಟ ಹಾಕಲಿಲ್ಲವೆಂದು ಕೋಪಗೊಂಡು 20 ವರ್ಷದ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಆಶಿಶ್ ರಿಯಲ್ ಎಸ್ಟೇಟ್ ಡೀಲರ್ ಆಗಿದ್ದು, ಪಿಸ್ತೂಲ್ ನಿಂದ ಪಾರೂಲ್ ನ ತಲೆ ಮತ್ತು ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪಾರೂಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಕುಟುಂಬ ಸದಸ್ಯರು ಬಂದಿದ್ದಾರೆ. ಅಷ್ಟರಲ್ಲಿ ಪಾರೂಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸ್ವತಃ ಆಶಿಶ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!