Monday, June 8, 2026
Homeಕರಾವಳಿಸುವರ್ಣ ತ್ರಿಭುಜ ಬೋಟ್ ಮುಳುಗಡೆ ಪ್ರಕರಣಕ್ಕೆ 2 ವರ್ಷ- ನಾಪತ್ತೆಯಾದ 7ಜನ ಕಡಲಮಕ್ಕಳ ನಿರೀಕ್ಷೆಯಲ್ಲಿದೆ ಕುಟುಂಬಗಳು!..

ಸುವರ್ಣ ತ್ರಿಭುಜ ಬೋಟ್ ಮುಳುಗಡೆ ಪ್ರಕರಣಕ್ಕೆ 2 ವರ್ಷ- ನಾಪತ್ತೆಯಾದ 7ಜನ ಕಡಲಮಕ್ಕಳ ನಿರೀಕ್ಷೆಯಲ್ಲಿದೆ ಕುಟುಂಬಗಳು!..

- Advertisement -
- Advertisement -

ಉಡುಪಿ: ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಆಗಲೇ 2 ವರ್ಷಗಳು ಕಳೆದಿದೆ. ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಮಾಹಿತಿ ಇನ್ನು ದೊರೆತಿಲ್ಲ. 2018 ರ ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಡಿಸೆಂಬರ್ 15 ರಾತ್ರಿಯಿಂದ ಸಂಪರ್ಕ ಕಳೆದುಕೊಂಡಿತ್ತು.

ಬೋಟ್ ಮುಳುಗಡೆಯಾದ ಕುರಿತು ಯಾರಿಗೂ ಯಾವ ಮಾಹಿತಿಯು ಇಲ್ಲ. ಆ ನಂತರ ಮಾಲ್ಟನ್ ತೀರದಿಂದ ಸುಮಾರು 33 ಕಿಲೋಮೀಟರ್ ದೂರದ 64 ಮೀಟರ್ ಆಳದಲ್ಲಿ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾಗಿತ್ತು. ಅದರಲ್ಲಿ ಮೀನುಗಾರರು ಏನಾದರೂ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.ಆದರೆ ಕುಟುಂಬ ಮಾತ್ರ ಅವರು ಬರುತ್ತಾರೆ ಎನ್ನುವ ನಿರೀಕ್ಷೆ ಯಲ್ಲಿ ದಿನ ಕಳೆಯುತ್ತಿದ್ದಾರೆ.

- Advertisement -

Latest News

error: Content is protected !!