Monday, June 8, 2026
Homeತಾಜಾ ಸುದ್ದಿಬೆಳ್ತಂಗಡಿ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ- ಇಬ್ಬರು ಯುವತಿಯರನ್ನು ರಕ್ಷಿಸಿದ ಪೊಲೀಸರು!..

ಬೆಳ್ತಂಗಡಿ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ- ಇಬ್ಬರು ಯುವತಿಯರನ್ನು ರಕ್ಷಿಸಿದ ಪೊಲೀಸರು!..

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಮೇಲಂತ ಬೆಟ್ಟು ಗ್ರಾಮದ ಕಲ್ಲಗುಡ್ಡೆ ಬಳಿ ಬಾಡಿಗೆಗೆ ನೀಡಲಾಗಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದಲ್ಲಿ ಪೊಲೀಸರು ಬಾಡಿಗೆದಾರ ಹಾಗೂ‌‌ ಇತರ ಇಬ್ಬರನ್ನು ವಶಕ್ಕೆ ಪಡೆದ್ದಾರೆ.ರಾಮಚಂದ್ರ ದೇವಾಡಿಗ ಎಂಬವರು ತಮ್ಮ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದರು.

ಪ್ರಕರಣದಲ್ಲಿ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳಾದ ಜನಾರ್ಧನ ಪೂಜಾರಿ, ಜನಾರ್ಧನ ಅವರನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!