- Advertisement -
- Advertisement -
ಬೆಂಗಳೂರು: ಮಾಜಿ ಸಚಿವ ರೋಷನ್ಬೇಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. IMA ಕೇಸ್ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್.ರೋಷನ್ ಬೇಗ್ರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದರ ಬೆನ್ನಲ್ಲೇ ಇಂದು ದೆಹಲಿ ಮೂಲದ ಸಿಬಿಐನ 7 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ರೋಷನ್ ಬೇಗ್ ಪತ್ನಿಗೆ ಅಧಿಕಾರಿಗಳು ರೇಡ್ ಸಂಬಂಧ ಮಾಹಿತಿ ನೀಡ್ತಿದ್ದು ಬೆಂಗಳೂರಿನ ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಬಳಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
- Advertisement -