Saturday, October 17, 2026
Homeಕರಾವಳಿಮಂಗಳೂರುಕಲ್ಲಡ್ಕದ ಕುದ್ರೆಬೆಟ್ಟುವಿನಲ್ಲಿ ಭೀಕರ ಅಪಘಾತ: ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಯುವಕ ಸಾವು

ಕಲ್ಲಡ್ಕದ ಕುದ್ರೆಬೆಟ್ಟುವಿನಲ್ಲಿ ಭೀಕರ ಅಪಘಾತ: ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಯುವಕ ಸಾವು

- Advertisement -
- Advertisement -

ಬಂಟ್ವಾಳ: ಇಲ್ಲಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಬೋಲ್ಪೋಡಿ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಯುವಕ ಬಲಿಯಾಗಿದ್ದಾರೆ. ಬಾಳ್ತಿಲ ಗ್ರಾಮದ ಯತಿರಾಜ್ ಮೃತ ಯುವಕ.

ನಿನ್ನೆ ರಾತ್ರಿ ಯತಿರಾಜ್ 10-45ರ ಸುಮಾರಿಗೆ ಬೋಲ್ಪೋಡಿ ಬಳಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕಲ್ಲಡ್ಕ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ.ಪರಿಣಾಮ ಯತಿರಾಜ್ ಹಾಗೂ ಓಮ್ನಿ ಚಾಲಕ ಯೋಗೀಶ್ ಗಾಯಗೊಂಡಿದ್ದರು.ಕೂಡಲೇ ಅವರನ್ನು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು 11-15ರ ವೇಳೆಗೆ ಯತಿರಾಜ್ ಮೃತಪಟ್ಟಿರೋದನ್ನು ದೃಢ ಪಡಿಸಿದ್ದಾರೆ.

ಸದ್ಯ ಯೋಗೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ಮೃತ ಯತಿರಾಜ್ ಹಿಂದೂಪರ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!