Thursday, June 4, 2026
Homeತಾಜಾ ಸುದ್ದಿವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ: ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಪತ್ನಿ...

ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ: ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಪತ್ನಿ ಕೆಳಗೆ ಬಿದ್ದು ಸಾವು

- Advertisement -
- Advertisement -

ಬಾಗಲಕೋಟೆ: ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ ಎಂದು ಎಷ್ಟು ಹೇಳಿದ್ರು ಕೆಲವರಂತೂ ಬುದ್ಧಿ ಕಲಿಯೋದೇ ಇಲ್ಲ.  ಹೀಗೆ ಯೋಧನೊಬ್ಬ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ಮಾಡಿದ ಪರಿಣಾಮ ಅವರ ಪತ್ನಿ ಬೈಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ನಡೆದಿದೆ. ಪುಷ್ಪಲತಾ(35) ಮೃತ ದುರ್ದೈವಿ.

ಯೋಧ ಶೇಖರಯ್ಯ ಎಂಬವರು ಬೈಕ್‌ನಲ್ಲಿ ಹೊರಡುವ ವೇಳೆ ಮಗನ ವಿಡಿಯೋ ಕಾಲ್ ಬಂದಿದೆ. ಹೀಗಾಗಿ ಯೋಧ ಶೇಖರಯ್ಯ ಮಗನ ಜೊತೆ ಮಾತನಾಡುತ್ತಲೇ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಮುಂದಿದ್ದ ಹಂಪ್‌ ಗಮನಿಸದೆ ಬೈಕ್ ಓಡಿಸಿದ ಪರಿಣಾಮ ಹಂಪ್‌ನಲ್ಲಿ ಬೈಕ್ ಜಂಪ್ ಆಗಿ ಬೈಕ್ ಹಿಂಬದಿ ಕುಳಿತಿದ್ದ ಯೋಧನ ಪತ್ನಿ ಪುಷ್ಪಲತಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಪತ್ನಿಯ ಸಾವಿನಿಂದ ಯೋಧ ರಸ್ತೆಯಲ್ಲಿ ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ‌ ಇನ್ನು ಇಂದು ಬೆಳಗ್ಗೆ ಕರ್ತವ್ಯಕ್ಕೆ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಾಗಿತ್ತು.  ಹಾಗಾಗಿ ಪತ್ನಿಯನ್ನು ಹಿರೆಮಳಗಾವಿ ಗ್ರಾಮದಲ್ಲಿರುವ ತವರು ಮನೆಗೆ ಬಿಡಲು ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಷ್ಪಲತಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!