Thursday, June 4, 2026
Homeತಾಜಾ ಸುದ್ದಿಕಿಡ್ನಿ ವೈಫಲ್ಯದಿಂದ ಖ್ಯಾತ ಕಿರುತೆರೆ ನಟಿ ವಿಧಿವಶ

ಕಿಡ್ನಿ ವೈಫಲ್ಯದಿಂದ ಖ್ಯಾತ ಕಿರುತೆರೆ ನಟಿ ವಿಧಿವಶ

- Advertisement -
- Advertisement -

ಮುಂಬೈ: ಖ್ಯಾತ ಧಾರಾವಾಹಿ ಕ್ಲಾಸ್ ಆಫ್ 2020 ಹಾಗೂ ಸೆಥ್ ಜೀ ಸೀರಿಯಲ್ ನಲ್ಲಿ ನಟಿಸಿರುವ ಕಿರು ತೆರೆ ನಟಿ ಲೀನಾ ಆಚಾರ್ಯ ಕಿಡ್ನಿ ಸಂಬಂಧಿತ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ ಎಂದು ನಟ ರೋಹನ್ ಮೆಹ್ರಾ ತಿಳಿಸಿದ್ದಾರೆ.

ನಟಿ ಲೀನಾ ಆಚಾರ್ಯ ನಿನ್ನೆ ದಿಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕ್ಲಾಸ್ ಆಫ್ 2020ರಲ್ಲಿ ಲೀನಾ ರೊಂದಿಗೆ ಸಹ ನಟರಾಗಿದ್ದ ಮೆಹ್ರಾ ತಿಳಿಸಿದ್ದಾರೆ.ನಾನು ನಿನ್ನೆ ಲೀನಾ ಅವರ ಸಹೋದರನನ್ನು ಭೇಟಿಯಾದಾಗ ಲೀನಾ ಅವರಿಗೆ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆ ಇರುವ ವಿಚಾರ ಗೊತ್ತಾಯಿತು. ಆಕೆ ತಾಯಿ ದಾನ ಮಾಡಿರುವ ಕಿಡ್ನಿಯಲ್ಲಿ ಜೀವಿಸುತ್ತಿದ್ದರು ಎಂದು ಲೀನಾರ ಸಹ ನಟ ಆಯೂಷ್ ಆನಂದ್ ಹೇಳಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಕ್ಲಾಸ್ ಆಫ್ 2020ರ ಶೂಟಿಂಗ್ ನಲ್ಲಿದ್ದೆವು. ನಾನೀಗ ನಿಮ್ಮಿಂದ ವಂಚಿತನಾಗಿದ್ದೇನೆ ಎಂದು ರೋಹನ್ ಮೆಹ್ರಾ ಫೋಟೊದ ಜೊತೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

- Advertisement -

Latest News

error: Content is protected !!