Thursday, April 25, 2024
Homeತಾಜಾ ಸುದ್ದಿಪ್ರಭುದೇವ್ ದೇವ ಮದುವೆಯಾಗಿದ್ದನ್ನು ಖಚಿತ ಪಡಿಸಿದ ಸಹೋದರ ರಾಜು ಸುಂದರಂ

ಪ್ರಭುದೇವ್ ದೇವ ಮದುವೆಯಾಗಿದ್ದನ್ನು ಖಚಿತ ಪಡಿಸಿದ ಸಹೋದರ ರಾಜು ಸುಂದರಂ

spot_img
- Advertisement -
- Advertisement -

ನವದೆಹಲಿ: ಖ್ಯಾತ ಡ್ಯಾನ್ಸರ್, ತಮಿಳು ನಟ ಪ್ರಭುದೇವ್ ವೈದ್ಯೆ ಹಿಮಾನಿ ಅವರನ್ನು ವಿವಾಹವಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಪ್ರಭುದೇವ್ ಸಹೋದರ ರಾಜು ಸುಂದರಂ ಖಚಿತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭುದೇವ ಸಹೋದರ ರಾಜು ಸುಂದರಂ ನಿಮಗೆಲ್ಲಾ ಈಗಾಗಲೇ ತಿಳಿದಿರುವಂತೆ ಪ್ರಭುದೇವ್, ಹಿಮಾನಿ ಅವರನ್ನು ವಿವಾಹವಾಗಿದ್ದಾರೆ. ಇವರ ವಿವಾಹ ನಮಗೆಲ್ಲರಿಗೂ ಅತ್ಯಂತ ಸಂತೋಷವನ್ನು ಉಂಟುಮಾಡಿದೆ ಎಂದಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಬೆನ್ನು ಹಾಗೂ ಕಾಲಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದ ಪ್ರಭುದೇವ್ ಗೆ ತನ್ನ ಆರೈಕೆ ಮಾಡುತ್ತಿದ್ದ ವೈದ್ಯೆ ಹಿಮಾನಿ ಮೇಲೆ ಪ್ರೇಮಾಂಕುರವಾಗಿತ್ತು.  ನಂತರ 2 ತಿಂಗಳುಗಳ ಕಾಲ ಚೆನೈನಲ್ಲಿ ಜೊತೆಯಾಗಿ ಕಾಲ ಕಳೆದ ಇವರಿಬ್ಬರು, ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇ ತಿಂಗಳಲ್ಲಿ ಕೋವಿಡ್ -19 ಲಾಕ್ ಡೌನ್ ನಿಯಮದಂತೆ ಕೇವಲ ಮನೆಯ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದು, ಆ ಬಳಿಕ ಕೇವಲ 2 ಬಾರಿಯಷ್ಟೆ ಹಿಮಾನಿ, ಪ್ರಭುದೇವ್ ಕುಟುಂಬದವರನ್ನು ಭೇಟಿಯಾಗಲು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ಪ್ರಭುದೇವ್ ಅವರ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ರಾಮಲತಾ ಸೇರಿದಂತೆ ಎರಡು ಮಕ್ಕಳಿದ್ದಾರೆ. ಹಾಗೆಯೇ ಕೆಲಕಾಲ ನಟಿ ನಯನಾ ತಾರಾ ಜೊತೆಯಲ್ಲಿಯೂ ಅನೋನ್ಯವಾಗಿದ್ದರು.

- Advertisement -
spot_img

Latest News

error: Content is protected !!