Thursday, April 25, 2024
Homeತಾಜಾ ಸುದ್ದಿಪಾರ್ಟಿ ಮಾಡ್ಬೇಕು ಅನ್ನೋ ಕಾರಣಕ್ಕೆ ಮದುವೆಯಾದ ಹೈಸ್ಕೂಲ್ ಬಾಲಕರು

ಪಾರ್ಟಿ ಮಾಡ್ಬೇಕು ಅನ್ನೋ ಕಾರಣಕ್ಕೆ ಮದುವೆಯಾದ ಹೈಸ್ಕೂಲ್ ಬಾಲಕರು

spot_img
- Advertisement -
- Advertisement -

ಆಸ್ಟ್ರೇಲಿಯಾ:ಪಾರ್ಟಿ ಮಾಡೋಕೆ ನೆಪ ಬೇಕು ಅನ್ನೋ ಕಾರಣಕ್ಕೆ ಹೈಸ್ಕೂಲ್ ಬಾಲಕರು ಮದುವೆ ನಾಟಕವಾಡಿದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.

ಹೈಸ್ಕೂಲ್ ಮಕ್ಕಳು ತಮ್ಮ ಸಹಪಾಠಿಗಳ ಜೊತೆ ಪಾರ್ಟಿ ಏರ್ಪಡಿಸಿದ್ದರು. ಆದರೆ ಪಾರ್ಟಿಗೆ 100 ಮಂದಿಗೆ ಆಹ್ವಾನ ಕೊಡೋದು ಕೊರೊನಾ ಮಾರ್ಗಸೂಚಿಯಿಂದಾಗಿ ಸಾಧ್ಯವಿರಲಿಲ್ಲ. ಆಸ್ಟ್ರೇಲಿಯಾದಲ್ಲಿರುವ ಮಾರ್ಗಸೂಚಿ ಪ್ರಕಾರ 20 ರಿಂದ 30 ಮಂದಿಗಷ್ಟೇ ಆಹ್ವಾನ ನೀಡಲು ಅವಕಾಶವಿತ್ತು. ಆದರೆ ಮದುವೆ ಸಮಾರಂಭಕ್ಕೆ 150 ಮಂದಿ ಭಾಗವಹಿಸಲು ಅವಕಾಶವಿದೆ ಎಂಬುದನ್ನ ತಿಳಿದುಕೊಂಡ ಇಬ್ಬರು ಗಂಡು ಮಕ್ಕಳು ಈ ಮದುವೆ ನಾಟಕ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಮದುವೆಯಾದ ಫೋಟೋಗಳನ್ನ ಕಂಡ ಪೋಷಕರು ಹೌಹಾರಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಷಕರು ಶಾಕ್​ ಆಗಿದ್ದಾರೆ. ಇದರಲ್ಲಿ ಒಬ್ಬ ಹುಡುಗನ ತಂದೆ ಇದು ಮಕ್ಕಳಾಟವಾಗಿದ್ದು ಈ ಮದುವೆಯನ್ನ ಮಾನ್ಯ ಎಂದು ಪರಿಗಣಿಸೋಕೆ ಸಾಧ್ಯವಿಲ್ಲ ಎಂದಿದ್ದಾರೆ.

- Advertisement -
spot_img

Latest News

error: Content is protected !!