Friday, June 5, 2026
Homeತಾಜಾ ಸುದ್ದಿನಾಮಕರಣಕ್ಕೂ ಮುನ್ನ ಅಮ್ಮ ಹಾಗೂ ಅಜ್ಜಿಯ ದುಡುಕು ನಿರ್ಧಾರಕ್ಕೆ ಹಸುಗೂಸು ಬಲಿ

ನಾಮಕರಣಕ್ಕೂ ಮುನ್ನ ಅಮ್ಮ ಹಾಗೂ ಅಜ್ಜಿಯ ದುಡುಕು ನಿರ್ಧಾರಕ್ಕೆ ಹಸುಗೂಸು ಬಲಿ

- Advertisement -
- Advertisement -

ಕಾರವಾರ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಿಂದ ಶುಕ್ರವಾರ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಯಲ್ಲಾಪುರ ತಾಲೂಕಿನ ಗಣೇಶ್ ಪಾಲ್ ಹೊಳೆಯಲ್ಲಿ ಪತ್ತೆಯಾಗಿವೆ.

ಮೃತರನ್ನು ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿಯವರ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.

ಇನ್ನು ಮೃತ ವಾಣಿಯವರನ್ನು ಶಿವಮೊಗ್ಗಕ್ಕೆ ವಿವಾಹ ಮಾಡಿ ಕೊಡಲಾಗಿತ್ತು. ಅಲ್ಲದೇ ನಿನ್ನೆ ಅವರ ಮಗುವಿಗೆ ನಾಮಕರಣ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!