Sunday, June 7, 2026
Homeತಾಜಾ ಸುದ್ದಿಚಲಿಸುತ್ತಿರುವ ರೈಲಿನಿಂದ ತುಂಗಾ ನದಿಗೆ ಹಾರಿದ ಯುವತಿ!..

ಚಲಿಸುತ್ತಿರುವ ರೈಲಿನಿಂದ ತುಂಗಾ ನದಿಗೆ ಹಾರಿದ ಯುವತಿ!..

- Advertisement -
- Advertisement -

ಶಿವಮೊಗ್ಗ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಜನಶತಾಬ್ದಿ ರೈಲಿನಿಂದ ಯುವತಿಯೋರ್ವಳು ತುಂಗಾ ನದಿಗೆ ಬಿದ್ದಿರುವ ಘಟನೆ ನಡೆದಿದೆ.ಚಲಿಸುತ್ತಿರುವ ರೈಲಿನಿಂದ ಯುವತಿ ನದಿಗೆ ಬಿದ್ದಿದ್ದಾಳೆ.

ಯುವತಿ ಗಾಡಿಕೊಪ್ಪದ ನಿವಾಸಿ ಸಹನಾ (24) ಎಂದು ಗುರುತಿಸಲಾಗಿದೆ.ಗುರುವಾರ ರಾತ್ರಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿನಲ್ಲಿ ಸಹನಾ ತನ್ನ ತಂದೆ ತಾಯಿ ಜೊತೆ ಪ್ರಯಾಣಿಸುತ್ತಿದ್ದಳು. ರೈಲು ಶಿವಮೊಗ್ಗದ ತುಂಗಾ ಸೇತುವೆ ಮೇಲೆ ಬರುತ್ತಿದ್ದ ವೇಳೆ ಸಹನಾ ನದಿಗೆ ಬಿದ್ದಿದ್ದಾಳೆ. ನದಿಗೆ ಉದ್ದೇಶಪೂರ್ವಕವಾಗಿ ಹಾರಿದ್ದಾಳೋ ಅಥವಾ ರೈಲಿನಿಂದ ಕಾಲು ಜಾರಿ ಬಿದ್ದಿದ್ದಾಳೋ ಎಂಬುದರ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ.

ಘಟನೆ ನಡೆದ ತಕ್ಷಣವೇ ಯುವತಿಯ ತಂದೆ ತಾಯಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

- Advertisement -

Latest News

error: Content is protected !!