Friday, June 5, 2026
Homeಕರಾವಳಿಕಡಬದಲ್ಲೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ- ಅಂತಿಮ ಸಂಸ್ಕಾರವಿಲ್ಲದೆ 18ಗಂಟೆಗಳಿಂದ ತೋಡಿನಲ್ಲೇ ಬಿದ್ದುಕೊಂಡಿರುವ ಶವ!..

ಕಡಬದಲ್ಲೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ- ಅಂತಿಮ ಸಂಸ್ಕಾರವಿಲ್ಲದೆ 18ಗಂಟೆಗಳಿಂದ ತೋಡಿನಲ್ಲೇ ಬಿದ್ದುಕೊಂಡಿರುವ ಶವ!..

- Advertisement -
- Advertisement -

ಕಡಬ: ಇಲ್ಲಿನ ಪಂಜ ಸಮೀಪದ ಆಳವಾದ ನೀರಿರುವ ತೋಡಿನಲ್ಲಿ ಶವವೊಂದು ಪತ್ತೆಯಾಗಿದ್ದು ಶವ ಕೊಳೆತ ಸ್ಥಿತಿಯಲ್ಲಿದೆ. ಈ ಕುರಿತು ಸ್ಥಳೀಯರು ಈಗಾಗಲೇ ಪೊಲೀಸ್ ಠಾಣೆ ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ನಿನ್ನೆ ಸಂಜೆ ಪತ್ತೆಯಾಗಿರುವ ಶವವನ್ನು 18ಗಂಟೆ ಕಳೆದರೂ ಇನ್ನೂ ಮೇಲೆತ್ತಿ ಅಂತಿಮ ಸಂಸ್ಕಾರ ನಡೆಸದೆ ಅಮಾನವೀಯತೆ ಮೆರೆಯಲಾಗಿದೆ.

ನೆಲ್ಲಿಕಟ್ಟೆಯಿಂದ ಜಳಕದಹೊಳೆಗೆ ಹೋಗುವ ದಾರಿಯಲ್ಲಿ ಗುಂಡಡ್ಕ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.ಈ ಕುರಿತು ಸ್ಥಳೀಯ ಪಂಚಾಯತ್ ಮತ್ತು ಪಿ.ಡಿಒ ಬಳಿ ಜನರು ಮಾಹಿತಿ ನೀಡಿದ್ದರಾದರು ಯಾವುದೇ ಪ್ರಯೋಜನವಾಗಿಲ್ಲ.

- Advertisement -

Latest News

error: Content is protected !!