Thursday, May 16, 2024
Homeತಾಜಾ ಸುದ್ದಿಕೊರೊನಾ ಹಾವಳಿಗೆ ಈ ರೆಸ್ಟೋರೆಂಟ್‍ ಮಾಡಿದೆ ಹೊಸ ಐಡಿಯಾ!.. ಜಾಯಿಂಟ್ ವೀಲ್ಹ್ ನಲ್ಲಿ ಸ್ಕೈಲೈನ್ ಡೈನಿಂಗ್...

ಕೊರೊನಾ ಹಾವಳಿಗೆ ಈ ರೆಸ್ಟೋರೆಂಟ್‍ ಮಾಡಿದೆ ಹೊಸ ಐಡಿಯಾ!.. ಜಾಯಿಂಟ್ ವೀಲ್ಹ್ ನಲ್ಲಿ ಸ್ಕೈಲೈನ್ ಡೈನಿಂಗ್ ವ್ಯವಸ್ಥೆ

spot_img
- Advertisement -
- Advertisement -

ಬುಡಾಪೆಸ್ಟ್– ಕೋವಿಡ್-19 ವೈರಸ್ ಹಾವಳಿಯಿಂದ ಜನ ಸಾಮಾನ್ಯರು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಇದಕ್ಕಾಗಿ ಹಂಗೇರಿಯ ಬುಡಾಪೆಸ್ಟ್‍ನಲ್ಲಿರುವ ಕೊಸ್ಟೆಸ್ ಪ್ರಸಿದ್ಧ ರೆಸ್ಟೋರೆಂಟ್ ಹೊಸ ಪ್ರಯತ್ನ ಒಂದನ್ನು ರೂಪಿಸಿದೆ. ಕೊರೊನಾ ಹಾವಳಿಯಿಂದಾಗಿ ಈ ರೆಸ್ಟೋರೆಂಟ್‍ಗೆ ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯರು ಬರುವ ಸಂಖ್ಯೆ ಕಡಿಮೆಯಾಗಿತ್ತು.

ಇದರಿಂದಾಗಿ ಈ ಹೋಟೆಲ್ ಆದಾಯ ಕುಂಠಿತವಾಗಿ ಹೊಸ ಪರಿಕಲ್ಪನೆಯನ್ನು ರೂಪುಗೊಳಿಸಿದೆ.ಬುಡಾಪೆಸ್ಟ್ ನಗರದಲ್ಲಿರುವ ಪ್ರಮುಖ ಆಕರ್ಷಣೆಯ ತಾಣ ಐ ಪೇರಿಸ್ ಜಾಯಿಂಟ್ ವೀಲ್ಹ್‍ನಲ್ಲಿ ಸ್ಕೈಲೈನ್ ಡೈನಿಂಗ್ ವ್ಯವಸ್ಥೆ ಮಾಡಿ ಜನರನ್ನು ಆಕರ್ಷಿಸುವ ಜೊತೆಗೆ ತನ್ನ ಆದಾಯವನ್ನೂ ಈ ರೆಸ್ಟೋರೆಂಟ್ ವೃದ್ಧಿಸಿಕೊಂಡಿದೆ.

ಕೋವಿಡ್-19 ವೈರಸ್ ಸುರಕ್ಷತೆಯೊಂದಿಗೆ ಬೃಹತ್ ಚಕ್ರದಲ್ಲಿ ಪ್ರವಾಸಿಗರಿಗೆ ಊಟೋಪಚಾರದ ಅತಿಥ್ಯ ಸೇವೆ ಒದಗಿಸುತ್ತಿರುವ ಕೊಸ್ಟೆಸ್ ರೆಸ್ಟೋರೆಂಟ್ ದೇಶ-ವಿದೇಶಗಳ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಜಾಯಿಂಟ್ ವೀಲ್ಹ್‍ನಲ್ಲಿ ಪ್ರತ್ಯೇಕ ಕ್ಯಾಬಿನ್‍ಗಳು ಇವೆ. ಸಾಮಾಜಿಕ ಅಂತರದ ಸಮಸ್ಯೆ ಇರುವುದಿಲ್ಲ. ಜನರು ಪ್ರತ್ಯೇಕವಾಗಿ ಕುಳಿತು ಆಹಾರ ಸೇವಿಸುತ್ತಾ ಜಾಯಿಂಟ್ ವೀಲ್ಹ್ ಅನುಭವ ಪಡೆಯಬಹುದಾಗಿದೆ.

- Advertisement -
spot_img

Latest News

error: Content is protected !!