ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ವಾರ್ಡ್ನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರ ದುರಸ್ತಿಗೆ ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಾಲಿಕೆಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, “ಕದ್ರಿ ಶಿವಭಾಗ್ ವಾರ್ಡ್ನ ಹದಗೆಟ್ಟ ರಸ್ತೆಯ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1ರಡಿ ಅಗತ್ಯ ಅನುದಾನ ಮೀಸಲಿಡಲಾಗಿತ್ತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅನುದಾನವನ್ನು ತಡೆಹಿಡಿದ ಕಾರಣ ರಸ್ತೆ ದುರಸ್ತಿಯಾಗದೆ ಸ್ಥಳೀಯರು ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ” ಎಂದು ಆರೋಪಿಸಿದರು.
ಈ ಕುರಿತು ಸಂಬಂಧಪಟ್ಟ ಎಲ್ಲರಿಗೂ ಈಗಾಗಲೇ ಮನವಿ ಸಲ್ಲಿಸಿದ್ದರೂ ಅಧಿಕಾರದಲ್ಲಿರುವವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನರ ನ್ಯಾಯಯುತ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳಿಂದ ಸಮಸ್ಯೆ ಎದುರಿಸುತ್ತಿರುವ ಎಲ್ಲ ವಾರ್ಡ್ಗಳಲ್ಲೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವ, ಮನೋಹರ್ ಶೆಟ್ಟಿ ಕದ್ರಿ, ಶಕೀಲಾ ಖಾವ, ಪ್ರಮುಖರಾದ ವಿಕ್ರಮ್ ಚೌಟ, ಜಯಕುಮಾರ್, ರವಿಚಂದ್ರ, ಪ್ರವೀಣ್ ನಿಡ್ಡೇಲ್, ರಾಮಚಂದ್ರ ಚೌಟ, ಅಶ್ವಿತ್ ಕೊಟ್ಟಾರಿ, ಕಿರಣ್ ದೇವಾಡಿಗ, ರಾಮ್ ಪ್ರಸಾದ್, ನವೀನ್ ಶೆಣೈ, ದೀಪಕ್ ಡಿಸೋಜ, ಟೀನಾ, ಜೆಸೆಲ್, ಕಮಲಾಕ್ಷಿ, ಚರಣ್ ಶೆಟ್ಟಿ, ಪ್ರಶಾಂತ್ ಆಳ್ವ, ವೆಂಕಟೇಶ್, ವರುಣ್ ಅಂಬಟ್, ಋತ್ವಿಕ್ ಕದ್ರಿ, ಆಲ್ವಿನ್, ವಿಜಯ್ ಭಂಡಾರಿ, ಗೋಪಾಲ್, ಯೋಗೀಶ್ ಶೆಣೈ, ಅರ್ಚನಾ ಆಳ್ವ, ಭಾಸ್ಕರ್ ಚಂದ್ರ ಶೆಟ್ಟಿ, ಮಹಾಬಲ ಕುಲಾಲ್, ಪ್ರಶಾಂತ್ ಕಂಕನಾಡಿ, ನಟರಾಜ್ ಆಳ್ವ ಸೇರಿದಂತೆ ಹಲವು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.


