Saturday, June 6, 2026
Homeತಾಜಾ ಸುದ್ದಿಕಣ್ಣೀರಿಡುತ್ತಾ ದೀಪಿಕಾ ದಾಸ್ ರವಿ ಬೆಳಗರೆ ಬಗ್ಗೆ ಹೇಳಿದ್ದೇನು?

ಕಣ್ಣೀರಿಡುತ್ತಾ ದೀಪಿಕಾ ದಾಸ್ ರವಿ ಬೆಳಗರೆ ಬಗ್ಗೆ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು:ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ. ರವಿ ಬೆಳಗೆರೆ ನಿಧನಕ್ಕೆ ಇಡೀ ಕರುನಾಡೇ ಕಂಬನಿ ಮಿಡಿಯುತ್ತಿದೆ. ಇನ್ನು ರವಿ ಬೆಳಗೆರೆ ನಿಧನಕ್ಕೆ ಬಿಗ್ ಬಾಸ್ ಖ್ಯಾತಿ ದೀಪಿಕಾ ದಾಸ್ ಬೇಸರ ವ್ಯಕ್ತ ಪಡಿಸಿದ್ದಾರೆ,

ಬಿಗ್ ಬಾಸ್ ಸೀಸನ್ 7 ನಲ್ಲಿ ರವಿ ಬೆಳಗೆರೆ ಅವರು ಅತಿಥಿಯಾಗಿ ದೊಡ್ಡ ಮನೆಗೆ ಎಂಟ್ರಿ ಕೊಟ್ಟಿದರು. ಈ ವೇಳೆ ದೀಪಿಕಾ ದಾಸ್ ಅವರು ರವಿ ಬೆಳಗೆರೆಗೆ ಅತ್ಯಂತ ಆಪ್ತರಾಗಿದ್ದರು. ಇಂದು ಬೆಳಗ್ಗೆಯೇ ರವಿ ಬೆಳಗೆರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ದೀಪಿಕಾ, ಕಣ್ಣೀರು ಸುರಿಸುತ್ತಲೇ, ಬಿಗ್​ಬಾಸ್​ನಲ್ಲಿ ನಾವೆಲ್ಲ ಒಟ್ಟಾಗಿದ್ದೆವು. ಒಂದು ವಾರವಷ್ಟೇ ಅವರೊಟ್ಟಿಗೆ ಸಮಯ ಕಳೆದೆವು. ಕೆಲ ಜನರು ಹೇಳೋ ರವಿ ಬೆಳೆಗೆರೆನೆ ಬೇರೆ. ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ. ಕೆಲ ಜನರು ಅವರನ್ನ ತುಂಬಾ ಕ್ರೂರಿ ಥರಾ ನೋಡುತ್ತಿದ್ದರು. ಆದರೆ, ಬಿಗ್​ಬಾಸ್ ಮನೆಯಲ್ಲಿ ತುಂಬಾ ಮುಗ್ಧರಂತಿದ್ದರು. ನಿಜಕ್ಕೂ ಇವತ್ತು ಅವರಿಲ್ಲ ಅಂದ್ರೆ ನಮಗೆ ತುಂಬಾ ನೋವಾಗುತ್ತೆ ಎಂದು ಎಂದ್ರು.

ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ದೀಪಿಕಾ ಅವರು ರವಿ ಬೆಳಗೆರೆ ಅವರನ್ನು ಭೇಟಿ ಮಾಡಿದ್ದರು. ಇದೀಗ ಅವರ ಅಗಲಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!