Friday, June 5, 2026
Homeತಾಜಾ ಸುದ್ದಿನಟಿ ಪೂನಂ ಪಾಂಡೆಯನ್ನು ಬಂಧಿಸಿದ ಗೋವಾ ಪೊಲೀಸರು

ನಟಿ ಪೂನಂ ಪಾಂಡೆಯನ್ನು ಬಂಧಿಸಿದ ಗೋವಾ ಪೊಲೀಸರು

- Advertisement -
- Advertisement -

ಪಣಜಿ : ಅಶ್ಲೀಲ ವಿಡಿಯೋ ಚಿತ್ರೀಕರಣದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಅವರನ್ನು ಉತ್ತರ ಗೋವಾ ಪೊಲೀಸರು ಇಂದು ಬಂಧಿಸಿದ್ದಾರೆ. ನಿನ್ನೆಯಷ್ಟೇ ಪೂನಂ ಪಾಂಡೆ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪೂನಂ ಚಿತ್ರಗಳು ಹರಿದಾಡುತ್ತಿದ್ದ ಕುರಿತು ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಸದಸ್ಯರು ಕೇಸು ದಾಖಲಿಸಿದ್ದರು. ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದರೆಂದು ದೂರು ದಾಖಲಾಗಿರುವುದಲ್ಲದೆ ಅದೇ ಪ್ರಕರಣಕ್ಕೆ ಸಂಬಂಧಿಸಿ ಕ್ಯಾನಕೋನಾ ಪೋಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧವೂ ಸಹ ಎಫ್‌ಐಆರ್ ದಾಖಲಿಸಲಾಗಿತ್ತು.

ಅದರಂತೆ ಇಂದು ಉತ್ತರ ಗೋವಾ ಪೊಲೀಸರು ಪೂನಂ ಪಾಂಡೆಯನ್ನು ಬಂಧಿಸಿದ್ದಾರೆ. ಸದಾ ಒಂದಿಲ್ಲೊಂದು ಯಡವಟ್ಟುಗಳ ಮೂಲಕವೇ ಸದ್ದು ಮಾಡುತ್ತಿರುವ ಪೂನಂಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

- Advertisement -

Latest News

error: Content is protected !!