Friday, June 5, 2026
Homeತಾಜಾ ಸುದ್ದಿಮಾಡೆಲಿಂಗ್ ಗೆ ಅವಕಾಶ ನೀಡೋದಾಗಿ ಹೇಳಿ ಯುವತಿಗೆ ವಂಚನೆ

ಮಾಡೆಲಿಂಗ್ ಗೆ ಅವಕಾಶ ನೀಡೋದಾಗಿ ಹೇಳಿ ಯುವತಿಗೆ ವಂಚನೆ

- Advertisement -
- Advertisement -

ಬೆಂಗಳೂರು: ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇರ್ತಾರೆ ಅನ್ನೋ ಮಾತಿನ ಹಾಗೇ ಮಾಡೆಲಿಂಗ್ ಹಾಗೂ ಸಿನಿಮಾಗಳಲ್ಲಿ ಅವಕಾಶ ನೀಡೋದಾಗಿ ಹೇಳಿ ಯುವತಿಯರಿಗೆ ವಂಚಿಸುವ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ.

ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಂಳೂರಿನಲ್ಲಿ ಬೆಳಕಿಗೆ ಬಂದಿದೆ. ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಖ್‌ಗೆ ಆಕೆಯ ಸ್ನೇಹಿತೆ ಸೂಫಿಯಾ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎನ್ನಲಾಗಿದೆ.

ರೂಪಾಗೆ ಮಾಡೆಲಿಂಗ್‌ನಲ್ಲಿ ಕೆಲಸ ಕೊಡಿಸುವುದಾಗಿ ಸೂಫಿಯಾ ರೂಪಾಳನ್ನು ನಂಬಿಸಿದ್ದಳಂತೆ. ರೂಪಾ ಬಳಿಯಿದ್ದ ಹಣವನ್ನು ಠೇವಣಿ ಮಾಡಲು ಹೋಗಿದ್ದ ವೇಳೆ ಸೂಫಿಯಾ ರೂಪದರ್ಶಿಯ 3 ಲಕ್ಷ ರೂಪಾಯಿ ಮತ್ತು 2 ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾಳೆ. ಸದ್ಯ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!