Sunday, June 7, 2026
Homeತಾಜಾ ಸುದ್ದಿಚುನಾವಣಾ ಪ್ರಚಾರದ ವೇಳೆ ದರ್ಶನ್ ಗರಂ ಆಗಿದ್ದ್ಯಾಕೆ?

ಚುನಾವಣಾ ಪ್ರಚಾರದ ವೇಳೆ ದರ್ಶನ್ ಗರಂ ಆಗಿದ್ದ್ಯಾಕೆ?

- Advertisement -
- Advertisement -

ಬೆಂಗಳೂರುಃ ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ತಮ್ಮ ಸ್ನೇಹಿತ ಮುನಿರತ್ನ ಅವರ ಪರ ಭರ್ಜರಿಯಾಗಿ ರೋಡ್ ಶೋ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ದರ್ಶನ್ ಮುನಿರತ್ನ ಪರ ಪ್ರಚಾರ ಮಾಡುತ್ತಿದ್ದಾರೆ.


ಇನ್ನು ದರ್ಶನ್ ರೋಡ್ ಶೋ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ದರ್ಶನ್ ಅವರನ್ನು ನೋಡದಕ್ಕೆ ಜನ ಮುಗಿ ಬೀಳುತ್ತಿದ್ದಾರೆ. ಹೀಗಿರುವಾಗಲೇ ದರ್ಶನ್ ಅವರು ಅಭಿಮಾನಿಗಳಗೆ ಕೈ ಸನ್ನೆಯ ಮೂಲಕವೇ ಮಾಸ್ಕ್ ಹಾಕಿಕೊಳ್ಳಿ ಅಂತಾ ಮನವಿ ಕೂಡ ಮಾಡಿದ್ರು. ಆ ಮೂಲಕ ದರ್ಶನ್ ಪ್ರಚಾರದ ನಡುವೆಯೇ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಿದ್ರು.

ಇದೆಲ್ಲದರ ನಡುವೆ ಖಾಸಗಿ ವಾಹಿನಿಯ ವರದಿಗಾರೊಬ್ಬರು ದಾಸನ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ಅಭಿಮಾನಿಗಳು ಮುನಿರತ್ನ ಪರವಾಗಿ ಮತ ಹಾಕುವಂತೆ ಮಾಡುತ್ತೀರಾ ಅನ್ನೋ ಅರ್ಥದಲ್ಲಿ ಪ್ರಶ್ನೆ ಕೇಳಿದ್ದಾರೆ. ವರದಿಗಾರನ ಈ ಪ್ರಶ್ನೆಗೆ ಕೊಂಚ ಖಡಕ್ ಆಗಿಯೇ ದರ್ಶನ್ ಉತ್ತರ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳನ್ನು ಸೇರಿಸ್ಬೇಡ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್.

- Advertisement -

Latest News

error: Content is protected !!